ತುರಿಕೆ ನಿವಾರಣೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಈ ಎಣ್ಣೆಯ ಉರಿಯೂತ ಕಡಿಮೆ ಮಾಡುವ ಲಕ್ಷಣಗಳ ಪರಿಣಾಮವಾಗಿ, ತುರಿಕೆ ಚರ್ಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆರ್ಕೈವ್ಸ್ ಆಫ್ ಡರ್ಮಟಾಲಾಜಿಕಲ್ ರಿಸರ್ಚ್ನಲ್ಲಿನ ಒಂದು ಅಧ್ಯಯನದ ಪ್ರಕಾರ ಈ ಎಣ್ಣೆಯ ಬಳಕೆ ಬೇಗನೆ ಪ್ರಯೋಜನೆ ನೀಡುವುದಲ್ಲದೆ , ತುರಿಕೆ ಮರುಕಳಿಸದಂತೆ ನೋಡಿಕೊಳ್ಳುತ್ತದೆ. ಇತರ ಏಜೆಂಟ್ಗಳಿಗಿಂತ ಅಲರ್ಜಿಕ್ ಡರ್ಮಟೈಟಿಸ್ ಅನ್ನು ಕಡಿಮೆ ಮಾಡಲು ಈ ಎಣ್ಣೆಯು ಉತ್ತಮವಾಗಿದೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ. ಟೀ ಟ್ರೀ ಎಣ್ಣೆಯನ್ನು ಆರಿಸುವುದರಿಂದ ಚರ್ಮದಿಂದ ಕಲ್ಮಶಗಳನ್ನು ತೆಗೆದುಹಾಕಬಹುದು.
ಟಿ ಟ್ರೀ ಎಣ್ಣೆಯನ್ನು ತೆಂಗಿನ ಎಣ್ಣೆ ಜೊತೆ ಮಿಕ್ಸ್ ಮಾಡಿ ಮತ್ತು ಪೀಡಿತ ಪ್ರದೇಶದ ಮೇಲೆ ಹಚ್ಚಿ. ಒಂದು ಅಥವಾ ಎರಡು ನಿಮಿಷ ಮಸಾಜ್ ಮಾಡಿ . ಮಿಶ್ರಣವನ್ನು ರಾತ್ರಿಯಿಡೀ ಬಿಡಿ. ಟೀ ಟ್ರೀ ಎಣ್ಣೆಯಲ್ಲಿ ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್ ಮತ್ತು ಆಂಟಿಫಂಗಲ್ ಗುಣಗಳಿವೆ, ಇದರಿಂದ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ.
ಈ ಎಣ್ಣೆ ಬಲವಾದ ಆಂಟಿ ಸೆಪ್ಟಿಕ್ ಆಗಿರುವುದರಿಂದ, ಉಗುರುಗಳು ಸುಲಭವಾಗಿ ಮುರಿಯಲು ಕಾರಣವಾಗುವ ಶಿಲೀಂಧ್ರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂಬುದು ಸಾಬೀತಾಗಿದೆ.