ಮನೆಯಂಗಳದ ಮದ್ದು ಬಳಸಿ ತ್ವಚೆ ಕಾಪಾಡಿ

ಭಾನುವಾರ, 30 ಏಪ್ರಿಲ್ 2017 (12:42 IST)
ಬೆಂಗಳೂರು: ಬೇಸಿಗೆಯಲ್ಲಿ ತ್ವಚೆಯನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು. ಸನ್ ಸ್ಕ್ರೀನ್ ಲೋಷನ್ ಗಳು ಬೇಸಿಗೆಯಲ್ಲಿ ಬರುವ ಕೆಂಪು ಗುಳ್ಳೆಗಳಿಂದ ತ್ವಚೆ ಕಾಪಾಡಲಾರದು. ಅದಕ್ಕೆ ಮನೆಯಲ್ಲೇ ಮಾಡಬಹುದಾದ ಮದ್ದು ಹೇಳುತ್ತೇವೆ ನೋಡಿ.

 
ಮೊಸರು ಮತ್ತು ಗರಿಕೆ ಹುಲ್ಲಿನಿಂದ ಚರ್ಮದಲ್ಲಿ ಬೀಳುವ ಗುಳ್ಳೆಗಳಿಂದ ರಕ್ಷಿಸಿಕೊಳ್ಳಬಹುದು. ಅದನ್ನು ಮಾಡುವುದು ತುಂಬಾ ಸುಲಭ. ಹೇಗೆಂದು ನೋಡೋಣ.

ಗರಿಕೆ ಹುಲ್ಲು ಹಲವು ರೋಗಗಳಿಗೆ ಔಷಧವಾಗಿ ಕೆಲಸ ಮಾಡುತ್ತದೆ. ಅದರ ರಸದಲ್ಲಿ ಭಾರೀ ಔಷದೀಯ ಗುಣಗಳಿವೆ. ಮೈ ತೊಳೆದುಕೊಂಡು ಚೆನ್ನಾಗಿ ಒರೆಸಿಕೊಂಡ ನಂತರ ಗರಿಕೆ ಹುಲ್ಲಿನ ರಸವನ್ನು ಮೈಗೆ ಹಚ್ಚಿಕೊಂಡು ಅರ್ಧಗಂಟೆ ಬಿಟ್ಟು ತೊಳೆದುಕೊಳ್ಳಿ. ಹೀಗೆ ದಿನ ನಿತ್ಯ ಮಾಡುತ್ತಿದ್ದರೆ ಸಾಕು.

ಅದೇ ರೀತಿ ಮೊಸರನ್ನೂ ಬಳಸಬಹುದು. ಮೊಸರನ್ನು ಕೆಂಪು ಗುಳ್ಳೆಗಳಾದ ಜಾಗಕ್ಕೆ ಅಪ್ಲೈ ಮಾಡಿ. ನಂತರ ಅದು ಒಣಗುವವರೆಗೆ ಬಿಡಿ. ನಂತರ ಚೆನ್ನಾಗಿ ತೊಳೆದುಕೊಳ್ಳಿ. ಮೊಸರಿನಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಅಂಶ ತ್ವಚೆಯನ್ನು ಕಾಪಾಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ