ಕಾದ ಕಬ್ಬಿಣ ಬರೆ ಹಾಕಿದರೆ ರೋಗ ಶಮನ!

WD
ನಂಬಿದರೆ ನಂಬಿ ಬಿಟ್ಟರೆ ಬಿಡಿ ಸರಣಿಯಲ್ಲಿ ಈಗಾಗಲೇ ನಾವು ಹಲವಾರು ವಿಚಿತ್ರ ಮತ್ತು ವೈರುಧ್ಯಗಳ ಪದ್ಧತಿಗಳನ್ನು ನೋಡಿಯಾಗಿದೆ.

ಅಂತಹ ಕೆಲ ಪದ್ಧತಿಗಳಲ್ಲಿ ಚಿಕಿತ್ಸಾ ವಿಧಾನ ಕೂಡ ಇದೆ. ರೋಗದಿಂದ ಬಳಲುವ ವ್ಯಕ್ತಿಯೊಬ್ಬ ಪರಿಹಾರ ಕಾಣದ ಸಮಯದಲ್ಲಿ ಹತಾಶನಾಗಿ ಇಂತಹ ವಿಚಿತ್ರ ನಂಬಿಕೆಗಳಿಗೆ ಬಲಿಯಾಗಿದ್ದು, ಅಲ್ಲದೇ ಪ್ರಾಣವನ್ನು ಕಳೆದುಕೊಂಡ ಉದಾಹರಣೆಗಳೂ ಇವೆ. ಆದ್ದರಿಂದ ಓದುಗರಲ್ಲಿ ಒಂದೇ ಒಂದು ವಿನಂತಿ. ದಯವಿಟ್ಟು ಇಂತಹ ಮೋಸಗಳಿಗೆ ಬಲಿಯಾಗಬೇಡಿ, ಮತ್ತು ಬೇರೆಯವರನ್ನು ಬಲಿಯಾಗಲು ಬಿಡಬೇಡಿ...

ಚಚವಾ ಚಿಕಿತ್ಸೆ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

ಇಂತಹ ವಿಚಿತ್ರ ಪದ್ಧತಿಗಳ ವಿರುದ್ಧ ಸಾಗಿರುವ ನಮ್ಮ ಪಯಣದಲ್ಲಿ ಈ ಬಾರಿ ಮಧ್ಯಪ್ರದೇಶದ ವಿದಿಷಾ, ಖಾಂಡ್ವಾ, ಬೈತೂಲದಲ್ಲಿ ಇಂದಿಗೂ ಪ್ರಚಲಿತದಲ್ಲಿರುವ ‘ಚಚವಾ’ ಎಂಬ ಘೋರ ಪದ್ಧತಿಯನ್ನು ಪರಿಚಯಿಸುತ್ತಿದ್ದೇವೆ.

‘ಚಚವಾ’ ಪದ್ಧತಿಯ ಮೂಲಕ ಚಿಕಿತ್ಸೆ ನೀಡುವವರಿಗೆ ಬಾಬಾ ಎಂದು ಕರೆಯುತ್ತಾರೆ. ಪದ್ಧತಿಯ ಅನ್ವಯ ರೋಗದಿಂದ ಬಳಲುವ ವ್ಯಕ್ತಿಗೆ ಮೊದಲು ಬೂದಿ ಬಳಿದು, ನಂತರ ಕಾದ ಕಬ್ಬಿಣದಿಂದ ಬರೆ ಹಾಕಲಾಗುತ್ತದೆ!
WD

ಈ ರೀತಿಯ ಚಿಕಿತ್ಸೆಯ ಕುರಿತು ನಮಗೆ ತಿಳಿದದ್ದೇ ತಡ, ನಾವು ಇಂತಹ ಒಬ್ಬ ಬಾಬಾನನ್ನು ಮೊಖಾ ಪಿಪಿಲಿಯಾ ಹಳ್ಳಿಯಲ್ಲಿ ಭೇಟಿಯಾದೆವು. ಅಂಬಾ ರಾಮ್ ಬಾಬಾ, ನಮ್ಮೊಂದಿಗೆ ನಡೆಸಿದ ಮಾತುಕತೆಯಲ್ಲಿ, ಕಳೆದ 20 ವರ್ಷಗಳಿಂದ ಈ ಚಿಕಿತ್ಸೆಯನ್ನು ರೋಗಿಗಳಿಗೆ ನೀಡುತ್ತಿದ್ದೇನೆ. ಅವನ ತಂದೆ ಕೂಡ ಇದೇ ಕಸುಬು ಮಾಡುತ್ತಿದ್ದರಂತೆ. ‘ಚಚವಾ’ ಮೂಲಕ ಹೊಟ್ಟೆ ನೋವು, ಗ್ಯಾಸ್ ಸಮಸ್ಯೆ, ಅಸ್ತಮಾ. ಪಾರ್ಶ್ವರೋಗ ಮುಂತಾದ ರೋಗಗಳಿಗೆ ಚಿಕಿತ್ಸೆ ನೀಡುವುದಾಗಿ ಹೆಮ್ಮೆಯಿಂದ ಹೇಳುತ್ತಾನೆ.

ಕಾದ ಕಬ್ಬಿಣದ ಬರೆ ಹಾಕಿದರೆ ರೋಗ ಗುಣವಾಗಬಲ್ಲುದೆ ಈ ಕುರಿತು ಇಲ್ಲಿ ಚರ್ಚಿಸಿ

WD
ಅಂಬಾರಾಮ್ ಪ್ರಕಾರ, ಕಾದ 'ಚಚವಾ' ಎಲ್ಲ ರೋಗಗಳನ್ನು ಸುಟ್ಟುಹಾಕುತ್ತದೆ. ಚಂದರ್ ಸಿಂಗ್ ಎಂಬ ರೋಗಿ 11 ಬಾರಿ ಚಚವಾ ಚಿಕಿತ್ಸೆಗೆ ಒಳಗಾಗಿದ್ದಾನೆ. ಅವನ ಪ್ರಕಾರ ಮೈಮೇಲೆ ಚಚವಾ ಬಿದ್ದ ಕೂಡಲೆ ರೋಗ ಹೋಗುತ್ತದೆ ಎಂದು ವಾದಿಸುತ್ತಾನೆ.

ಪ್ರತಿ ರವಿವಾರ, ಅಂಬಾರಾಮ್ ಮನೆಯ ಎದುರು ನೂರಾರು ಜನರು ಚಚವಾ ಮಾಡಿಸಿಕೊಳ್ಳಲು ಕಾಯುತ್ತಿರುತ್ತಾರೆ. ಈ ರೋಗಿಗಳ ಪಟ್ಟಿಯಲ್ಲಿ ಮಕ್ಕಳು ಮುದುಕರಾದಿಯಾಗಿ ನಿಂತಿರುತ್ತಾರೆ. ಅಂಬಾರಾಮ್ ಹೇಳುವ ಪ್ರಕಾರ, ಚಚವಾ ನೋವು ತರಿಸುವುದಿಲ್ಲ. ಆದರೆ ಚಚವಾ ಹಾಕಿಸಿಕೊಂಡ ಮಕ್ಕಳು ಅಳುವುದನ್ನು ನೋಡಿದರೆ ಅವರು ಹೇಳುವುದನ್ನು ಮಾತ್ರ ಅರ್ಥೈಸಿಕೊಳ್ಳಬಹುದು.

ಚಚವಾ ಚಿಕಿತ್ಸೆ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

ಹೀಗೆ ಒಂದು ಮಗುವಿಗೆ ಚಚವಾ ಹಾಕುವುದನ್ನು ತಪ್ಪಿಸಲು ನಾವು ಮಾಡಿದ ಪ್ರಯತ್ನ ವಿಫಲವಾಯಿತು. ಮಗುವಿನ ತಾಯಿಗೆ ಬೇಡ ಎಂದು ಹೇಳಿದರೆ, ಅವನಿಗೆ ಬೇಧಿ ಶುರುವಾಗಿದೆ. ಚಚವಾ ಹಾಕಿಸದಿದ್ದರೆ ಅವನು ಸಾಯುತ್ತಾನೆ ಎಂದು ರಂಪಾಟ ಮಾಡಿದಳು.
WD

ಡಾಕ್ಟರ್‌ಗಳನ್ನು ಕೇಳಿದರೆ, ಇದೆಲ್ಲ ಸಾಧ್ಯವಿಲ್ಲ. ಕೆಲ ಸಂದರ್ಭಗಳಲ್ಲಿ ಇಂಥದ್ದು ಮಾನಸಿಕ ರೋಗಗಳಿಗೆ ಪರಿಹಾರವಾಗಬಲ್ಲದು, ಆದರೆ ದೈಹಿಕ ರೋಗಗಳಿಗೆ ಅಲ್ಲ. ಒಂದು ಬಾರಿ ಒಬ್ಬ ದಂಪತಿ ನನ್ನ ಬಳಿ ತಮ್ಮ ನಾಲ್ಕು ತಿಂಗಳ ಮಗುವಿನೊಂದಿಗೆ ಚಿಕಿತ್ಸೆಗೆ ಬಂದಿದ್ದರು. ಏನಾಗಿತ್ತು ಅಂದರೆ ನನ್ನ ಬಳಿ ಬರುವ ಮುನ್ನ ಮಗುವಿಗೆ ಚಚವಾ ಹಾಕಿಸಲಾಗಿತ್ತು. ಅದು ಕೀವು ತುಂಬಿಕೊಂಡಿತ್ತು. ಸುಮಾರು ಒಂದು ತಿಂಗಳು ನಿರಂತರ ಶುಶ್ರೂಷೆ ಮಾಡಿದ ನಂತರ ಗಾಯ ವಾಸಿಯಾಯಿತು ಎಂದು ವಿವರಿಸಿದ್ದಾರೆ ಆ ವೈದ್ಯ.

ಕಾದ ಕಬ್ಬಿಣದ ಬರೆ ಹಾಕಿದರೆ ರೋಗ ಗುಣವಾಗಬಲ್ಲುದೆ ಈ ಕುರಿತು ಇಲ್ಲಿ ಚರ್ಚಿಸಿ