ಮುಟ್ಟಿದರೆ ರೋಗ ಉಪಶಮನ!

WD
ವಿಜ್ಞಾನ ಮುಂದುವರಿದಿದೆ. ಆದರೂ ನಂಬಿಕೆಗಳತ್ತ ಮನುಷ್ಯನ ಒಲವು ಕಡಿಮೆಯಾಗುತ್ತಿಲ್ಲ. ಪ್ರಕೃತಿ ವಿಸ್ಮಯ, ಅಚ್ಚರಿಗಳ ತಾಣ, ಪ್ರತಿಯೊಂದು ಹೆಜ್ಜೆಯಲ್ಲಿ ಮನುಷ್ಯನಿಗೆ ವಿಚಿತ್ರ ಅನುಭವಗಳನ್ನು ಧಾರೆ ಎರೆಯುತ್ತದೆ.

ದೇವರ ನಾಡು (Gods own Country) ಕೇರಳದತ್ತ ನಮ್ಮ ನಂಬಿಕೆ "ಅಪನಂಬಿಕೆಗಳ ನಡುವೆ" ತಂಡ ಈ ಬಾರಿ ಪಯಣವನ್ನು ಕೇರಳಕ್ಕೆ ಮುಂದುವರಿಸಿತು. ನಮ್ಮ ಪಯಣ ಸಾಗಿದ್ದು, ಸ್ಪರ್ಷ ಕಿತ್ಸಾ ಮಾಂತ್ರಿಕ ಬ್ರಹ್ಮಗುರುವಿನ ಬಳಿ.

ಸ್ಪರ್ಶ ಚಿಕಿತ್ಸೆಯ ಕುರಿತಾದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

ಸ್ಪರ್ಷ ಚಿಕಿತ್ಸೆಯನ್ನು ವಿಜ್ಞಾನ ಒಪ್ಪಿಕೊಂಡಿದ್ದರೂ ಅದು ಮಾನಸಿಕ ಸ್ಥಿಮಿತತೆಗೆ ಮಾತ್ರ ಎಂದು ಹೇಳುತ್ತದೆ. ಗಂಭೀರ ಕಾಯಿಲೆಗಳಿಗೆ ಮದ್ದಲ್ಲ ಎಂದು ವಾದಿಸಿದೆ. ಆತಂಕದಲ್ಲಿ, ಸೋಲಿನ ದವಡೆಗೆ ಸಿಕ್ಕ ವ್ಯಕ್ತಿಯ ತಾಯ್ ಮಮತೆಯ ಪ್ರೀತಿ ತುಂಬಿದ ಸ್ಪರ್ಷ ವ್ಯಕ್ತಿಯಲ್ಲಿ ಚೇತನ ಉಕ್ಕಿಸಬಹುದು.
WD

ಆದರೆ ಇಲ್ಲಿ ಸರ್ವ ಸಂಗ ಪರಿತ್ಯಾಗಿ "ಲೋಕ ಕಲ್ಯಾಣಾರ್ಥಂ ಇದಂ ಶರೀರಂ" ಎಂದು ತನ್ನ ಬಳಿ ಬರುವ ರೋಗಿಗಳನ್ನು ಕೇವಲ ಸ್ಪರ್ಷ ಮತ್ತು ಪವಿತ್ರ ಜಲದಿಂದ ಸಂಪ್ರೋಕ್ಷಿಸಿ ರೋಗದಿಂದ ಮುಕ್ತಗೊಳಿಸುತ್ತಾನೆ. ಸ್ಪರ್ಷ ಮಾತ್ರದಿಂದ ರೋಗ ನಿವಾರಣೆ ಸಾಧ್ಯ ಎಂದು ಹೇಳುವ ಬ್ರಹ್ಮಗುರು ಇಲ್ಲಿಯವರೆಗೆ ಬಂದ ರೋಗಿಗಳಿಗೆ ಒಂದೇ ಒಂದು ಔಷಧ ನೀಡಿಲ್ಲ. ಎಲ್ಲರಿಗೂ ಉಚಿತ ಇದು ಅವರ ಜೀವನದ ಉದ್ದೇಶ.

ಕೊಟ್ಟಾಯಂ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಚೆಂಗನಶೇರಿಯಲ್ಲಿ ಇರುವ ಎಂ ಡಿ ರವಿಮಾಸ್ಟರ್ ಮೂಲತಃ ಓರ್ವ ಸಿಂಪಿಗ. ಮೂಲ ಶಿಕ್ಷಣವನ್ನು ಪಡೆಯದೇ ಜನರ ರೋಗಗಳನ್ನು ನಿವಾರಣೆ ಮಾಡುವುದರಲ್ಲಿ ನಿರತನಾಗಿರುವ ಈತ ಇರುವುದು "ಬ್ರಹ್ಮ ಧರ್ಮ ಆಲಯದಲ್ಲಿ" ತ್ರಿವೇಂದ್ರಮ್‌ನಿಂದ 135, ಕೊಚ್ಚಿಯಿಂದ 87 ಕಿ ಮಿ ದೂರದಲ್ಲಿದೆ ಈ ಬ್ರಹ್ಮ ಧರ್ಮ ಆಲಯ.

ಸ್ಪರ್ಶ ಮಾತ್ರದಿಂದ ರೋಗ ಶಮನ ಸಾಧ್ಯವೇ? ಈ ಬಗ್ಗೆ ಇಲ್ಲಿ ಚರ್ಚಿಸಿ.

WD
ಪೂರ್ವಜನ್ಮದಲ್ಲಿ ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿ ಮನುಷ್ಯ ಜನ್ಮದಲ್ಲಿ ರೋಗದಿಂದ ವ್ಯಕ್ತಿ ಬಾಧಿತನಾಗುತ್ತಾನೆ. ಬೌತಿಕ ಜಗತ್ತನ್ನು ದಾಟಿ ಪರಮಾತ್ಮನಲ್ಲಿ ಲೀನವಾದಲ್ಲಿ ವ್ಯಕ್ತಿ ರೋಗ-ರುಜೀನಗಳಿಂದ ಮುಕ್ತನಾಗಬಹುದು ಎಂದು ಬ್ರಹ್ಮ ಗುರು ರವಿ ಮಾಸ್ಟರ್ ಹೇಳುತ್ತಾರೆ.

ಪ್ರಾರ್ಥನೆಯಲ್ಲಿ ನಿರತನಾಗಿದ್ದಾಗ ಎಲ್ಲ ದೇವರುಗಳೊಂದಿಗೆ ತಾನು ಮಾತನಾಡಬಲ್ಲೆ ಎಂದು ಹೇಳುತ್ತಾರೆ. ತನ್ನ ಅನುಯಾಯಿಗಳಿಗೆ ನಾನು ದೇವರಲ್ಲ. ನಿಸ್ವಾರ್ಥ ಸೇವೆ ತನ್ನ ಜೀವನದ ಉದ್ದೇಶ. ಮನುಷ್ಯ ಜೀವಿಯೊಬ್ಬನಿಗೆ ಕಾಡುವ ಎಲ್ಲ ರೋಗಗಳನ್ನು ತಾನು ಆಧ್ಯಾತ್ಮಿಕ ಶಕ್ತಿಯಿಂದ ಗುಣಪಡಿಸಬಲ್ಲೆ. ನನ್ನಲ್ಲಿನ ಬ್ರಹ್ಮ ತೇಜಸ್ಸು ರೋಗಿಯ ದೇಹವನ್ನು ನಿರೋಗಿಯನ್ನಾಗಿ ಮಾಡುತ್ತದೆ.

ಸ್ಪರ್ಶ ಚಿಕಿತ್ಸೆಯ ಕುರಿತಾದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

WD
ಸೋರಿಯಾಸಿಸ್ ಎಂಬ ಭೀಕರವಾದ, ಬೇರೆಯವರ ಮನದಲ್ಲಿ ಜಿಗುಪ್ಸೆ ತರುವ ರೋಗವನ್ನು ಕೇವಲ ಸ್ಪರ್ಷದಿಂದ ಗುಣಪಡಿಸಬಲ್ಲೆ. ಸೋರಿಯಾಸಿಸ್ ಮಟ್ಟಿಗೆ ವೈದ್ಯ ವಿಜ್ಞಾನ ಕೂಡ ಅಷ್ಟು ಮುಂದುವರಿದಿಲ್ಲ. ಪ್ರಾಥಮಿಕ ಹಂತದಲ್ಲಿನ ರೋಗವನ್ನು ಮಾತ್ರ ಅಧುನಿಕ ವೈದ್ಯಕೀಯ ಪದ್ದತಿ ಗುಣ ಪಡಿಸಬಲ್ಲದು.

ಸ್ಪರ್ಶ ಮಾತ್ರದಿಂದ ರೋಗ ಶಮನ ಸಾಧ್ಯವೇ? ಈ ಬಗ್ಗೆ ಇಲ್ಲಿ ಚರ್ಚಿಸಿ.

ಬ್ರಹ್ಮಗುರುವಿನ ಜನನ
WD
ರವಿ ಮಾಸ್ಟರ್ ಹುಟ್ಟಿದ್ದು, ಕೊಟ್ಟಾಯಂ ಜಿಲ್ಲೆಯ ತಿರುವಂಚೂರುನಲ್ಲಿ, 1953ರಲ್ಲಿ, ಹುಟ್ಟಿನಿಂದ ಭವಿಷ್ಯ ನುಡಿಯುವ ಶಕ್ತಿ ಇತ್ತು, ಕಾಲಕ್ರಮೇಣ ದೊಡ್ಡವನಾದ ಮೇಲೆ ಸಿಂಪಿಗ ವೃತ್ತಿಯನ್ನು ಬದುಕಿನ ಜೀವನಾಧಾರವಾಗಿ ಸ್ವೀಕರಿಸಿದರು. ಯೌವ್ವನಕ್ಕೆ ಬಂದ ನಂತರ ಒರ್ವ ಕ್ರಿಶ್ಚಿಯನ್ ಯುವತಿಯನ್ನು ವಿವಾಹವಾದರು.ದಂಪತಿಗಳಿಗೆ 1986ರಲ್ಲಿ ಒಂದು ಮಗು ಕೂಡ ಆಯಿತು. ಮಗು ಹುಟ್ಟಿನಿಂದ ಕುರುಡುತನದಿಂದ ಬಳಲುತ್ತಿತ್ತು.

ಕಂಡ ಕಂಡ ವೈದ್ಯರಲ್ಲಿ ಅಲೆದು ಪ್ರಯೋಜನವಾಗದಿದ್ದ ಮೇಲೆ ಮಗುವಿಗಾಗಿ ನಿತ್ಯ ಪ್ರಾರ್ಥನೆ ಶುರುವಾಯಿತು. ಒಂದು ದಿನ ಪ್ರಾರ್ಥನೆಗೆ ಮುನ್ನ ದೀಪ ಹಚ್ಚುವುದಕ್ಕೆ ಮಾಸ್ಟರ್ ಸಿದ್ದನಾಗುತ್ತಿದ್ದ. ಆ ಸಮಯದಲ್ಲಿ ದಿವ್ಯ ಶಕ್ತಿಯೊಂದು ದೇಹದಲ್ಲಿ ನುಸುಳಿದಂತೆ ಮಾಸ್ಟರ್‌ಗೆ ಅನುಭವ ಆಯಿತು. ಕನಸೋ, ನಿಜವೋ ಎಂದು ತೋಳಲಾಟದಲ್ಲಿ ಇದ್ದವನಿಗೆ, ನಾನು ಬ್ರಹ್ಮ ಸೃಷ್ಟಿಕರ್ತ ನಿನ್ನ ದೇಹವನ್ನು ಪ್ರವೇಶಿಸಿದ್ದೇನೆ.

ಸ್ಪರ್ಶ ಚಿಕಿತ್ಸೆಯ ಕುರಿತಾದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

ಇನ್ನು ನಾಲ್ಕು ದಿನಗಳಲ್ಲಿ ನಿನ್ನ ಮಗು ನಡೆದಾಡುತ್ತದೆ. ಕುರುಡುತನ ಹೋಗುತ್ತದೆ. ನಿನ್ನಲ್ಲಿರುವ ನನ್ನ ಬ್ರಹ್ಮ ತೇಜಸ್ಸಿನಿಂದ ಜನರ ಸೇವೆ ಮಾಡು ಅವರ ರೋಗ ಪರಿಹಾರ ಮಾಡು ಎಂದು ಹೇಳಿದಂತಾಯಿತು. ಹೀಗೆ ರವಿ ಮಾಸ್ಟರ್ ಬ್ರಹ್ಮ ಗುರುವಾಗಿದ್ದು.

ಬ್ರಹ್ಮ ತೀರ್ಥ

WD
ಬ್ರಹ್ಮ ತೀರ್ಥದ ನೀಡುವ ಬಗ್ಗೆ ಸ್ವಯಂಭೂ ದೀಪದಿಂದ ಮೊದಲೇ ತಿಳಿದುಕೊಂಡು ವರ್ಷಕ್ಕೆ ಒಂದು ಬಾರಿ ಮಾತ್ರ ಬ್ರಹ್ಮ ತೀರ್ಥವನ್ನು ಬ್ರಹ್ಮಗುರು ನೀಡುತ್ತಾರೆ.

ತೀರ್ಥ ನೀಡುವ ದಿನದಂದು ನವಗ್ರಹಗಳ ಶಕ್ತಿಗಳು ಬ್ರಹ್ಮಗುರುವಿನ ಮೇಲೆ ತಮ್ಮ ತೇಜಸ್ಸಿನ ಕರಣಗಳನ್ನು ಬೀರುತ್ತವೆ ಹಾಗೆ ಬಂದ ತೇಜಸ್ಸನ್ನು ತನ್ನ ಬಳಿ ಇರುವ ನೀರಿಗೆ ವರ್ಗಾಯಿಸಿ, ಶಕ್ತಿ ಪಡೆದ ತೀರ್ಥವನ್ನು ಬಂದ ಜನರಿಗೆ ನೀಡುತ್ತಾರೆ.

ಸ್ಪರ್ಶ ಮಾತ್ರದಿಂದ ರೋಗ ಶಮನ ಸಾಧ್ಯವೇ? ಈ ಬಗ್ಗೆ ಇಲ್ಲಿ ಚರ್ಚಿಸಿ.