ಅನಿಲ್ ಕಪೂರ್ 'ನಾಯಕ್ 2 ' ಚಿತ್ರಕ್ಕೆ ಕೇಜ್ರಿವಾಲ್ ಸ್ಫೂರ್ತಿ
ಗುರುವಾರ, 2 ಜನವರಿ 2014 (12:52 IST)
PR
PR
ಮುಂಬೈ: ಅಣ್ಣಾ ಹಜಾರೆ ಅವರ ಜನಲೋಕಪಾಲ್ ಚಳವಳಿಯನ್ನು ಅಪ್ಪಟ ಹೋಲುತ್ತಿದ್ದ ಪ್ರಕಾಶ್ ಝಾ ಅವರ 'ಸತ್ಯಾಗ್ರಹ' ಚಿತ್ರದ ಬಳಿಕ ಅನಿಲ್ ಕಪೂರ್ ಅವರಿಗೆ ನಾಯಕ್ 2 ಚಿತ್ರದಲ್ಲಿ ದೆಹಲಿಯ ಮುಖ್ಯಮಂತ್ರಿ ಗದ್ದುಗೆಗೆ ಏರಿದ ಅರವಿಂದ್ ಕೇಜ್ರಿವಾಲ್ ಸ್ಫೂರ್ತಿಯಾಗಲಿದ್ದಾರೆ. ಅನಿಲ್ ಕಪೂರ್ ಅವರ 2001ರ ನಾಯಕ್ ಚಿತ್ರದಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬ ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿಯಾಗುವ ಪಾತ್ರವನ್ನು ವಹಿಸಿದ್ದರು. ಕೇಜ್ರಿವಾಲ್ ಅವರನ್ನು ದೆಹಲಿಯ ನಿಜಜೀವನದ'ನಾಯಕ್ ' ಎಂದು ಜನರು ಕರೆಯುತ್ತಿದ್ದು, ಅನಿಲ್ ಕಪೂರ್ ಬದಲಿಗೆ ಕೇಜ್ರಿವಾಲ್ ಪೋಸ್ಟರ್‌ಗಳನ್ನು ಒಯ್ಯುತ್ತಿದ್ದರು. ಚಿತ್ರಕಥೆಯ ಬಗ್ಗೆ ಒಂದು ವರ್ಷದಿಂದ ಕೆಲಸ ನಡೆಯುತ್ತಿದ್ದು, 2015ರಲ್ಲಿ ಚಿತ್ರವು ಬಿಡುಗಡೆಯಾಗಲಿದೆ ಎಂದು ಅನಿಲ್ ಕಪೂರ್ ಹೇಳಿದ್ದಾರೆ.
ಅನಿಲ್ ಕಪೂರ್ ಕೇಜ್ರಿವಾಲ್ ಪಾತ್ರವನ್ನು ನಿರ್ವಹಿಸಲಿದ್ದು, ಸಹ ನಿರ್ಮಾಪಕರು ಕೂಡ ಆಗಿದ್ದಾರೆ. ನಾಯಕ್ 1 ಚಿತ್ರದಲ್ಲಿ ರಾಜಕಾರಣಿ ಪಾತ್ರವಹಿಸಿದ್ದ ಅಮರೀಶ್ ಪುರಿ ಸ್ವರ್ಗಸ್ಥರಾಗಿದ್ದು, ನಾಯಕ್ 2ರಲ್ಲಿ ಖಳನಾಯಕನ ಪಾತ್ರಧಾರಿ ಯಾರು ಎನ್ನುವುದನ್ನು ಕಾದುನೋಡಿ.