ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

Sampriya

ಗುರುವಾರ, 10 ಜುಲೈ 2025 (15:25 IST)
Photo Credit X
ದಾವಣಗೆರೆ: ಹೆಣ್ಣು ಯಾವ ಡ್ರೆಸ್ ಹಾಕ್ಬೇಕು, ಹಾಕಬಾರದು ಎನ್ನುವುದು ಅವಳ ಆಯ್ಕೆ ಎಂದು ಹೇಳುವ ಮೂಲಕ ನಟಿ ಭಾವನ ರಾಮಣ್ಣ ಅವರ ಐವಿಎಫ್ ತಂತ್ರಜ್ಞಾನದಿಂದ ಗರ್ಭಿಣಿ ಆಗುತ್ತಿರುವುದಕ್ಕೆ ನಟಿ ರಾಗಿಣಿ ದ್ವಿವೇದಿ ಬೆಂಬಲ ಸೂಚಿಸಿದ್ದಾರೆ. 

ಗುರುಪೂರ್ಣಿಮೆ ಹಿನ್ನೆಲೆ ಸೊಕ್ಕೆ ಗ್ರಾಮದ ಶಿರಡಿ ಸಾಯಿಬಾಬಾ ಮಂದಿರಕ್ಕೆ ಅವರು ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತೀ ಹೆಣ್ಣಿಗೂ ಅವಳ ಆಯ್ಕೆ ಅನುಸಾರ ಜೀವ ನಡೆಸುವ ಹಕ್ಕಿದೆ. ಯಾವ ಕೆಲಸ ಮಾಡಬೇಕು, ಯಾವ ಬಟ್ಟೆ ಹಾಕಬೇಕು, ಹೇಗೆ ತಾಯಿ ಆಗಬೇಕು ಎನ್ನುವುದು ಆಕೆಯ ಆಯ್ಕೆ. ತಾಯ್ತನ ಎನ್ನುವುದು ಒಂದು ರೀತಿಯ ಅದ್ಭುತವಾದ ಕೆಲಸ. ಅದು ಹಾಗೇ ಮಾಡಬೇಕು, ಇದನ್ನು ಹೀಗೆ ಮಾಡಬೇಕು ಎನ್ನುವುದು ತಪ್ಪು ಎಂದರು. 

ಭಾವನ ಅ‌ವರು ಅಮ್ಮ ಆಗುತ್ತಿರುವ ವಿಚಾರದಲ್ಲಿ ತುಂಬಾನೇ ಖುಷಿಯಾಗಿದ್ದಾರೆ. ಈ ವಿಚಾರದಲ್ಲಿ ನಾವು ಅವರನ್ನು ಜಡ್ಜ್ ಮಾಡಿ, ಟ್ರೋಲ್‌, ನೆಗೆಟಿವ್ ಕಮೆಂಟ್ ಮಾಡುವುದು ತುಂಬಾನೇ ತಪ್ಪು. ಇದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು. 

ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದ ಸಾಯಿಬಾಬಾ ಮಂದಿರಕ್ಕೆ 2ನೇ ವರ್ಷದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ರಾಗಿಣಿ ಭಾಗಿಯಾಗಿದ್ದರು. ಕಾಡುಸಿದ್ದೇಶ್ವರ ಮಠ ನೊಣವಿನಕೆರೆ ಶಿವಯೋಗೀಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಕಾರ್ಯಕ್ರಮ ನೆರವೇರಿತು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ