ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳೂ ಈಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಆದರೆ ಎಲ್ಲಾ ಆರೋಪಿಗಳೂ ಕಡ್ಡಾಯವಾಗಿ ಪ್ರತಿ ತಿಂಗಳೂ ಕೋರ್ಟ್ ಗೆ ಹಾಜರಾಗಬೇಕಾಗುತ್ತದೆ.
ಅದರಂತೆ ಇಂದು ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳೂ ಕೋರ್ಟ್ ಗೆ ಹಾಜರಾಗಲಿದ್ದಾರೆ. ಇದಕ್ಕೆ ಮೊದಲು ಅವರು ತಮ್ಮ ರಾಜರಾಜೇಶ್ವರಿ ನಗರ ನಿವಾಸದಲ್ಲಿ ತುಳಸಿ ಗಿಡಕ್ಕೆ ನೀರು ಹಾಕಿ ಸೂರ್ಯದೇವರಿಗೆ ನಮಸ್ಕರಿಸಿ ಭಕ್ತಿ ಮೆರೆದಿದ್ದಾರೆ.
ಜುಲೈ 11 ರಿಂದ 30 ರವರೆಗೆ ವಿದೇಶಕ್ಕೆ ತೆರಳಲು ಅವರು ಕೋರ್ಟ್ ಒಪ್ಪಿಗೆ ಪಡೆದಿದ್ದಾರೆ. ನಾಳೆಯಿಂದ ಅವರು ಥೈಲ್ಯಾಂಡ್ ಗೆ ತೆರಳಲಿದ್ದಾರೆ. ಡೆವಿಲ್ ಸಿನಿಮಾ ಹಾಡುಗಳ ಚಿತ್ರೀಕರಣ ಮುಗಿಸಿಕೊಂಡು ವಾಪಸ್ ಭಾರತಕ್ಕೆ ಬರಲಿದ್ದಾರೆ.