ಬಹು ನಿರೀಕ್ಷೆಯ ಮತ್ತು ಬಹು ಕೋಟಿಯ ಪ್ರಾಜೆಕ್ಟ್ ಬಾಹುಬಲಿ. ಇದು ನಿರ್ದೇಶಕ ರಾಜಮೌಳಿ ಅವರ ಕನಸು. ಈ ಚಿತ್ರದ ಚಿತ್ರೀಕರಣ ಅನೇಕ ತಿಂಗಳುಗಳಿಂದ ನಿರಂತರವಾಗಿ ಸಾಗುತ್ತಿದೆ.
ಈಗ ಬಂದಿರುವ ತಾಜಾ ಸುದ್ದಿ ಅಂದ್ರೆ ಬಾಹುಬಲಿ ಚಿತ್ರದಲ್ಲಿ ರಾಜಮೌಳಿ ಅನುಷ್ಕಳಿಗೆಂದು ಒಂದಷ್ಟು ಹಾಟ್ ದೃಶ್ಯಗಳನ್ನು ಸೇರ್ಪಡೆ ಮಾಡಿದ್ದಾರಂತೆ. ಈವರೆಗೂ ಆ ಚಿತ್ರದಲ್ಲಿ ಯುದ್ಧದ ಬಗ್ಗೆ ಕೇಳಿದ್ದ ಓದುಗರಿಗೆ ಇದು ಹೊಸ ಸುದ್ದಿ.
ಐತಿಹಾಸಿಕ ಅಂಶಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಇಂತಹ ದೃಶ್ಯಗಳು ಕಥೆಗೆ ಪೂರಕ ಆಗಿದೆ ಎನ್ನುವುದು ಸದ್ಯದ ಸುದ್ದಿ ಆಗಿದೆ.
PR
ಸಾಮಾನ್ಯವಾಗಿ ರಾಜಮೌಳಿ ಚಿತ್ರದಲ್ಲಿ ಹೀರೋ ಹಿರೋಯಿನ್ , ವಿಲನ್ ಗಳಿಗೆ ಮಾತ್ರವಲ್ಲ ಇತರ ಪಾತ್ರಗಳಿಗೂ ಸಹ ಆದ್ಯತೆ ಇದೆ ಇರುತ್ತದೆ.
ಅನುಷ್ಕ ನಟಿಸುತ್ತಿರುವ ಈ ಚಿತ್ರದಲ್ಲಿ ಒಂದು ಸನ್ನಿವೇಶದಲ್ಲಿ ಹಾಟ್ ರೋಮಾನ್ಸ್ ಮಾಡ ಬೇಕಂತೆ. ಯುದ್ಧದ ಸನ್ನಿವೇಶಕ್ಕೆ ಮುನ್ನ ಈ ದೃಶ್ಯ ಹೆಚ್ಚಿನ ಗಮನ ಸೆಳೆಯುತ್ತದೆಯಂತೆ.
ಅನುಷ್ಕ ಈವರೆಗೂ ಮಾಡಿರದೆ ಇದ್ದಂತಹ ರೋಮಾನ್ಸ್ ಬಾಹುಬಲಿ ಚಿತ್ರದಲ್ಲಿ ಇರುತ್ತದೆಯಂತೆ.ಅನುಷ್ಕ ಅಭಿಮಾನಿಗಳು ಆ ದೃಶ್ಯ ಕಾಣಲು ಕಾತುರದಿಂದ ಕಾಯುತ್ತಿದ್ದಾರೆ.