ಅಸಿನ್ ಗೆ ಇರುವ ಆಸೆ ಯಾವುದು ಗೊತ್ತೇ?

ಶನಿವಾರ, 15 ಫೆಬ್ರವರಿ 2014 (09:56 IST)
PR
ನೂರು ಕೋಟಿಗಳ ಪ್ರಾಜೆಕ್ಟ್ ನಲ್ಲಿ ಅಸಿನ್ ನಟಿಸಿ ಬಾಲಿವುಡ್ ನಲ್ಲಿ ತನ್ನದೇ ಆದ ಸ್ಥಾನ ಪಡೆದಿದ್ದಾಳೆ ಈ ಮಲ್ಲು ಹುಡುಗಿ. ಆರು ವರ್ಷದ ತನ್ನ ಕೆರಿಯರ್ ನಲ್ಲಿ ಬಾಲಿವುಡ್ ಸ್ಟಾರ್ ನಟರಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಅಮೀರ್ ಖಾನ್ ರಂತಹ ಘಟಾನುಘಟಿಗಳ ಜೊತೆಗೆ ನಟಿಸಿ ಸೈ ಎನ್ನಿಸಿ ಕೊಂಡಿದ್ದಾಳೆ ಈ ಚೆಲುವೆ.

2012ರಲ್ಲಿ ಬಿಡುಗಡೆ ಆದ ಖಿಲಾಡಿ - 786ರಲ್ಲಿ ಅಂತಿಮವಾಗಿ ಕಂಡಿದ್ದು. ಬಾಲಿವುಡ್ ನಲ್ಲಿ ಇರುವುದಕ್ಕೆ ನನಗೆ ತುಂಬಾ ಖುಷಿ ಅನ್ನಿಸಿದೆ. ಅದನ್ನು ನನ್ನ ಅದೃಷ್ಟ ಎಂದು ತಿಳಿಯುತ್ತೇನೆ. ಸ್ವಲ್ಪಕಾಲದಲ್ಲೆ ದೊಡ್ಡ ದೊಡ್ಡ ನಟರೊಂದಿಗೆ ನಟಿಸುವ ಅವಕಾಶ. ಆ ಸಿನಿಮಾಗಳು ಸಹ ಉತ್ತಮ ಫಲಿತಾಂಶ ಕಂಡಿವೆ. ಚೆನ್ನಾಗಿ ಹಣ ಗಳಿಕೆ ಮಾಡಿವೆ. ಒಂದು ಬಾರಿ ಬಾಕ್ಸ್ ಆಫೀಸಿನ ರೆಕಾರ್ಡ್ ಸಹ ಬದಲಾಯಿಸಿದೆ. ಆದರೆ ಇಂತಹ ಸಿನಿಮಾಗಳಲ್ಲಿ ನಟಿಸಿ ಸಾಕಾಗಿದೆ .

ವೆಬ್ದುನಿಯಾವನ್ನು ಓದಿ