ಇಪ್ಪತ್ತು ಲಕ್ಷ ಕೊಡಿ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಬರ್ತೀನಿ ಎಂದ ತಮ್ಮು !
ಬುಧವಾರ, 19 ಮಾರ್ಚ್ 2014 (10:31 IST)
PR
ಟಾಲಿವುಡ್ ನಲ್ಲಿ ಡಬ್ಬಿಂಗ್ ಚಿತ್ರವು ತೆರೆ ಕಾಣಲಿದೆ. ಅದರ ಹೆಸರು ವೀರುಡೊಕ್ಕಡೆ. ತಮಿಳಿನಲ್ಲಿ ವೀರಂ ಹೆಸರಿನಿದ ಬಿಡುಗಡೆ ಕಂಡ ಈ ಚಿತ್ರ ಬಾಕ್ಸಾಫೀಸಿನಲ್ಲಿ ಉತ್ತಮ ಗಳಿಕೆ ಮಾಡಿತ್ತು. ಈಗ ಈ ಚಿತ್ರದ ತೆಲುಗು ಅವತರಣಿಕೆ ಬಿಡುಗಡೆ ಆಗ ಬೇಕಿದೆ. ಇದರಲ್ಲಿ ಅಜಿತ್ ಮತ್ತು ತಮನ್ನ ನಟಿಸಿದ್ದಾರೆ.
ತಮಿಳು ಚಿತ್ರ ಸಂಕ್ರಾಂತಿ ಸಮಯದಲ್ಲಿ ಬಿಡುಗಡೆ ಆಗಿತ್ತು.ಆಗ ತೆಲುಗಿನಲ್ಲೂ ಬಿಡುಗಡೆ ಆಗುವ ಸಾಧ್ಯತೆ ಇದ್ದರು ರಾಮ್ ಚರಣ್ ಮತ್ತು ಮಹೇಶ್ ಬಾಬು ಚಿತ್ರಗಳು ಬಿಡುಗಡೆ ಆಗುತ್ತಿದ್ದರಿಂದ ಈ ಚಿತ್ರವನ್ನು ರಿಲೀಸ್ ಮಾಡುವುದಕ್ಕೆ ಆದ್ಯತೆ ನೀಡಲಿಲ್ಲ ನಿರ್ಮಾಪಕರು .
PR
ಈ ಚಿತ್ರದ ತೆಲುಗು ಅವತರಣಿಕೆಯಾದ ವೀರುಡೊಕ್ಕಡೆ ಈ ಸಮ್ಮರ್ ನಲ್ಲಿ ಬಿಡುಗಡೆ ಆಗುತ್ತಿದೆ. ಆದ್ದರಿಂದ ಅದಕ್ಕೆ ಸಂಬಂಧಪಟ್ಟಂತೆ ಗ್ರಾಂಡ್ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಏರ್ಪಡಿಸಿ ಪಬ್ಲಿಸಿಟಿ ಮಾಡುವ ಉದ್ದೇಶ ಹೊಂದಿದ್ದಾರೆ ನಿರ್ಮಾಪಕರು.ಈ ಚಿತ್ರವೂ ಸಹಿತ ಕೂತಿಗಳಷ್ಟು ಹಣ ಗಳಿಕೆ ಮಾಡುತ್ತದೆ ಎನುವ ಆಶಯ ಹೊಂದಿದ್ದಾರೆ ನಿರ್ಮಾಪಕರು.
ಆದ ಕಾರಣ ಈ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ತಮನ್ನಳನ್ನು ಕರೆಯುವ ಉದ್ದೇಶ ಹೊಂದಿದ ನಿರ್ಮಾಪಕರು ಆಕೆಯ ಬಳಿ ಕೇಳಿದಾಗ ಇಪ್ಪತ್ತು ಲಕ್ಷ ಕೊಟ್ಟರೆ ಬರ್ತೀನಿ ಎಂದು ಹೇಳಿದ್ದಾಳೆ ಆಕೆ .ಆದರೆ ನಿರ್ಮಾಪಕರು ಅಷ್ಟು ಕೊಡಲು ಸಾಧ್ಯ ಇಲ್ಲ ಎಂದ ಕಾರಣ ಆಕೆ 16ಲಕ್ಷಕ್ಕೆ ಓಕೆ ಅಂದಳಂತೆ. ಅಲ್ಲದೆ ಆ ಮೊತ್ತ ನೀಡಿ ತನ್ನ ಬೇರೆಯ ಖರ್ಚುಗಳನ್ನು ನೋಡಿ ಕೊಳ್ಳ ಬೇಕು ಎಂದು ಹೇಳಿದ್ದಾಳಂತೆ ತಮ್ಮು ! ತಮನ್ನಾ ಅಂದ್ರೆ ಸುಮ್ಮನೇನಾ !