ಐಟಂ ಗರ್ಲ್ ಮುಮೈತೋ ಖಾನ್ ಈಗ ಏನು ಮಾಡಲು ಹೊರಟಿದ್ದಾರೆಂದರೆ!
ಶುಕ್ರವಾರ, 28 ಫೆಬ್ರವರಿ 2014 (10:03 IST)
PR
ಐಟಂ ಗರ್ಲ್ ಮುಮೈತೋ ಖಾನ್ ಈಗ ಏನು ಮಾಡಲು ಹೊರಟಿದ್ದಾರೆ ಗೊತ್ತೇ ? ಒಂದು ಕಾಲದಲ್ಲಿ ಅಲ್ಲದೆ ಇದ್ದರು ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ದಕ್ಷಿಣ ಭಾರತದ ಐಟಂ ಗರ್ಲ್ ಪಟ್ಟಿಯಲ್ಲಿ ಸೆಕ್ಸಿ ಮುಮೈತೋ ಖಾನ್ ಹೆಸರು ಮೊದಲಿತ್ತು. ಆಕೆಯ ಡ್ಯಾನ್ಸ್ ಅಂದ್ರೆ ಇಡಿ ದಕ್ಷಿಣ ಭಾರತದ ಚಿತ್ರ ರಸಿಕರು ಹಿಂದೆ ಬಿದ್ದು ತಮ್ಮ ಪ್ರೀತಿಯನ್ನು ತೋರುತ್ತಿದ್ದರು.
ತೆಲುಗು ತಮಿಳು, ಕನ್ನಡ ಚಿತ್ರರಂಗದಲ್ಲಿ ತನ್ನ ಮೈ ಮಾಟದಿಂದ ಮನಸೆಳೆದ ಈ ಚೆಲುವೆಗೆ ಆನಂತರದ ದಿನಗಳಲ್ಲಿ ಅವಕಾಶಗಳು ಇಲ್ಲದೆ ಹೋಯಿತು. ಈಗ ಆಕೆ ಪುನಃ ತನ್ನನ್ನು ಚಾಲ್ತಿಯಲ್ಲಿ ಇಟ್ಟು ಕೊಳ್ಳಲು ಒಂದು ಐಡಿಯಾ ಮಾಡಿದ್ದಾಳೆ. ತನ್ನ ದೇಹ ಸಿರಿಯನ್ನು ಪಾಪ್ ಸಾಂಗ್ಸ್ ಮುಖಾಂತರ ತೋರಲು ಆಕೆ ಸಿದ್ಧ ಆಗಿದ್ದಾಳೆ.