ಒಂದಾದ ರಣಬೀರ್ ಮತ್ತು ಕತ್ರಿನ.. ಪ್ರೇಮ ಜಿಂದಾಬಾದ್ !

ಬುಧವಾರ, 26 ಫೆಬ್ರವರಿ 2014 (10:19 IST)
PR
ಸುದ್ದಿಗಳು ಹರಡುವ ವಿಷಯದಲ್ಲ್ಲಿ ಜನರು ಮಾಧ್ಯಮಗಳಿಗಿಂತ ಮುಂದೆ ಇರ್ತಾರೆ. ಕತ್ರಿನಾ ಕೈಫ್ ಮತ್ತು ರಣ ಬೀರ್ ಅವರ ಪ್ರೀತಿಯ ಬಗ್ಗೆಯೂ ಅನೇಕ ಕಥೆಗಳು ಹುಟ್ಟಿಕೊಂಡಿತ್ತು. ಅದಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ ಅವರು ಅವರು ನ್ಯೂಯಾರ್ಕ್ ಗೆ ಹೋಗಿ ಬಂದ ಬಳಿಕ ಭಾಗಶಃ ಬೇರೆ ಆಗಿದ್ದಾರೆ ಎನ್ನುವ ಸುದ್ದಿ ಹರಡಿತ್ತು.

ಇದಕ್ಕೆ ಪೂರಕವಾಗಿ ಅವರಿಬ್ಬರೂ ಅಮೀರ್ ಖಾನ್ ಅವರು ನೀಡಿದ ಪಾರ್ಟಿ ಸೇರಿದಂತೆ ಅನೇಕ ಪಾರ್ಟಿಗಳಿಗೆ ಬೇರೆ ಬೇರೆಯಾಗಿ ಬಂದಿದ್ದರು. ಇದರಿಂದ ಇವರಿಬ್ಬರು ಬಿಟ್ಟೆ ಹೋಗಿದ್ದಾರೆ ಅನ್ನುವ ಸುದ್ದಿ ಹೆಚ್ಚಾಗಿ ಹರಡಿತ್ತು. ಆದರೆ ಅವೆಲ್ಲವೂ ಈಗ ಸುಳ್ಳು ಅನ್ನುವಂತೆ ಈ ಜೋಡಿ ವ್ಯಾಲೆಂಟೈನ್ಸ್ ಡೇ ಯಂದು ಒಟ್ಟಿಗೆ ಸೇರಿ ಆ ದಿನವನ್ನು ಖುಷಿಯಾಗಿ ಸೆಲಬ್ರೆಟ್ ಮಾಡಿರುವ ಸುದ್ದಿ ಈಗ ಬಾಲಿವು ಹಾಟ್ ಹಾಟ್ ಸುದ್ದಿಯಾಗಿ ಹರಡಿದೆ. ಸದ್ಯಕ್ಕೆ ಅವರು ತಮ್ಮ ಮುಂದಿನ ರಜವನ್ನು ವಿದೇಶದಲ್ಲಿ ಕಳಿಯುವ ಬಗ್ಗೆ ಯೋಜನೆ ಹಾಕಿದ್ದಾರೆ.

ಮಾರ್ಚ್ ಮೊದಲ ವಾರದಲ್ಲಿ ಈ ಜೋಡಿ ಸಿಕ್ಕಾಪಟ್ಟೆ ಬ್ಯುಸಿ ಆಗಿರುತ್ತಾರಂತೆ. ಅದಾದ ಬಳಿಕ ಕತ್ರಿನಾಗೆ ಮೂರು ದಿನಗಳು ಬಿಡುವು ದೊರೆತು ಆ ಮೂರು ದಿನಗಳಲ್ಲಿ ಅವರಿಬ್ಬರೂ ಒಂದು ಟ್ರಿಪ್ ಮಾಡುವ ಯೋಜನೆ ಹೊಂದಿದ್ದಾರಂತೆ.
PR

ಶ್ರೀಲಂಕ ಗೆ ಹೋಗಿ ಅಲ್ಲಿ ಅವರು ತಮ್ಮ ರಜೆಯನ್ನು ಕಳೆಯುತ್ತಾರೆ ಎಂದಿದೆ ಬಾಲಿವುಡ್ ಮಾಹಿತಿ ಕೇಂದ್ರ. ಸದ್ಯಕ್ಕೆ ರಣಬೀರ್ ಸಿನಿಮಾ ಬಾಂಬೆ ವೆಲ್ವೆಟ್ ಶ್ರೀಲಂಕಾದಲ್ಲಿ ತಯಾರಾಗುತ್ತಿದೆ. ಕತ್ರಿನಾ ಬಂಗ್ ಬಾಂಗ್ ಚಿತ್ರದಲ್ಲಿ ಬ್ಯುಸಿ. ಏನೇ ಆಗಿರಲಿ ಮುರಿದ ಮನಗಳು ಒಂದಾಗಿವೆ. ಅವರ ಬದುಕಲ್ಲಿ ಮತ್ತೆ ಇಂತಹ ಪರಿಸ್ಥಿತಿ ಎದುರಾಗದಿರಲಿ.. ಪ್ರೇಮ ಚಿರಾಯುವಾಗಲಿ.

ವೆಬ್ದುನಿಯಾವನ್ನು ಓದಿ