ಜಗ್ಗೇಶ್ ಮಗನಿಗೆ ಮದ್ವೆಯಂತೆ !

ಗುರುವಾರ, 27 ಫೆಬ್ರವರಿ 2014 (10:01 IST)
PR
ನವರಸ ನಾಯಕ ಜಗ್ಗೇಶ್ ಅವರ ಮಗ ಗುರುರಾಜ್ ಈಗ ಕನ್ನಡ ಚಿತ್ರರಂಗದಲ್ಲಿ ತಮಗೊಂದು ನೆಲೆ ಕಾಣಲು ಪ್ರಯತ್ನ ಪಡುತ್ತಿದ್ದಾರೆ. ಇವುಗಳ ನಡುವೆ ಅವರ ಮದುವೆಯ ಬಗ್ಗೆಯೂ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದೆ. ಈ ನಟ ನೆದರ್ ಲ್ಯಾಂಡ್ ಮುದ್ದಾದ ಹುಡುಗಿ ಕೇಟ್ ಪ್ಯಾಲೆ ಜೊತೆಯಲ್ಲಿ ಲವ್ವಾಗಿ ಈಗ ಮಾಡುವೆ ಆಗಲು ನಿಶ್ಚಯಿಸಿದ್ದಾರೆ.

ಈಕೆಯನ್ನು ಮೂರು ವರ್ಷಗಳ ಹಿಂದೆ ಗುರುರಾಜ್ ತೈಲ್ಯಾಂಡ್ ನಲ್ಲಿ ಭೇಟಿ ಆದರಂತೆ. ಅಲ್ಲಿ ಟೂರ್ ಗೆ ಹೋಗಿದ್ದ ಇವರ ಹೃದಯ ವನ್ನು ಕೇಟ್ ಕದ್ದಿದ್ದಳು. ಅವಳ ಬಳಿ ತನ್ನ ಹೃದಯ ಬಿಟ್ಟು ಬಂದಿದ್ದ ಈ ಕನ್ನಡದ ಹುಡುಗ ಈಗ ಆಕೆಯನ್ನು ಮದುವೆ ಆಗಲು ನಿಶ್ಚಯಿಸಿದ್ದಾರೆ .

ವೆಬ್ದುನಿಯಾವನ್ನು ಓದಿ