ಪ್ರಭುದೇವ ಯಾರಿಗೆ ಡ್ಯಾನ್ಸ್ ಹೇಳಿ ಕೊಡ್ತಾ ಇದ್ದಾರೆಂದ್ರೆ!

ಶನಿವಾರ, 15 ಫೆಬ್ರವರಿ 2014 (09:39 IST)
PR
ದಕ್ಷಿಣ ಭಾರತದ ಅತ್ಯಂತ ಹೆಮ್ಮೆಯ ನಟ, ನಿರ್ದೇಶಕ ಮತ್ತು ಕೊರಿಯಾಗ್ರಾಫರ್ ಪ್ರಭುದೇವ ಸಣ್ಣ ಪುಟ್ಟ ಪಾತ್ರದ ಮುಖಾಂತರ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಆದರು. ಅದಾದ ಬಳಿಕ ತಮ್ಮನ್ನು ಸಿನಿಮಾಗಳಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಉತ್ತಮ ರೀತಿಯಲ್ಲಿ ಬೆಳೆದರು.

ಈಗ ಈ ಸ್ಟಾರ್ ನಿರ್ದೇಶಕ ಬಾಲಿವುಡ್ ನಲ್ಲಿಯೂ ಸಹ ತಮ್ಮ ಪ್ರತಿಭೆ ತೋರಿ ಉತ್ತಮ ನಿರ್ದೇಶಕ ಎನ್ನುವ ಹೆಸರನ್ನು ಗಳಿಸಿದರು. ಅವರು ಈಗ ಆಕ್ಷನ್ ಜಾಕ್ಸನ್ ಅನ್ನುವ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಹೀರೋ ಅಜಯ್ ದೇವಗನ್.ಈ ಚಿತ್ರದಲ್ಲಿ ಪ್ರಭುದೇವ ಕೇವಲ ನಿರ್ದೇಶನ ಮಾಡದೆ ಅಜಯ್ ಅವರಿಗೆ ಡ್ಯಾನ್ಸ್ ಸಹ ಹೇಳಿ ಕೊಡುತ್ತಿದ್ದಾರಂತೆ.

PR
ಅಂದರೆ ಈಗ ಪ್ರಭು ಅವರದ್ದು ನಿರ್ದೇಶನದ ಜೊತೆಗೆ ಡ್ಯಾನ್ಸ್ ಹೇಳಿ ಕೊಡುವ ಕೆಲಸ. ಈ ಮುಖಾಂತರ ಆಕ್ಷನ್ ಕಿಂಗ್ ಅಜಯ್ ಅವರನ್ನು ಡ್ಯಾನ್ಸ್ ಕಿಂಗ್ ಮಾಡಲು ಹೊರಟಿದ್ದಾರೆ ಭಾರತದ ಮೈಕೆಲ್ ಜಾಕ್ಸನ್. ಅವರ ಈ ಕೆಲಸ ಅದೆಷ್ಟ ಮಟ್ಟಿಗೆ ಫಲಕಾರಿ ಆಗುತ್ತದೆಯೋ ಎಂಬುದನ್ನು ಕಾದು ನೋಡ ಬೇಕು.

ವೆಬ್ದುನಿಯಾವನ್ನು ಓದಿ