ಸಿನಿಮಾಗಳಲ್ಲಿ ಚಾನ್ಸ್ ಗಳು ಕಡಿಮೆ ಆದರೇ ಹೀರೋಯಿನ್ ಗಳು ಏನು ಮಾಡುತ್ತಾರೆ? ಮತ್ತೇನು ಐಟಂ ನಂಬರ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇಲ್ಲದೇ ಇದ್ದಲ್ಲಿ ಮದುವೆ ಆಗುತ್ತರೆ ಹೀಗೆ ಹಲವು ಉತ್ತರಗಳು ಹೇಳಬಹುದು. ಆದರೇ ತ್ರಿಶಾ ವಿಷಯದಲ್ಲಿ ಹಾಗಾಗಿಲ್ಲ ಆಕೆ ದಕ್ಷಿಣ ಭಾರತ ಚಿತ್ರಗಳಲ್ಲಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ. ಈಗ ಆಕೆಯ ಕೆರಿಯರ್ ಗ್ರಾಫ್ ಇಳಿಮುಖ ಆಗಿದೆ. ಹಾಗಂತ ಸದ್ಯಕ್ಕೆ ಮದುವೆ - ಐಟಂ ನಂಬರ್ ಅನ್ನದೇ ಆಕೆ ಪ್ರಾಣಿಗಳನ್ನು ಸಾಕೋಕೆ ಶುರು ಮಾಡಿದ್ದಾಳೆ.
ಅಂದರೇ ಈಕೆ ಹತ್ರ ಈಗ ಅನೇಕ ನಾಯಿಗಳಿವೆ .ಅವುಗಳನ್ನು ಕಾನೂನು ಬದ್ದವಾಗಿ ದತ್ತು ತೆಗೆದುಕೊಂಡಿದ್ದಾಳೆ ಆಕೆ. ಅನಿಮಲ್ ರೈಟ್ಸ್ ಆರ್ಗನೈಸೆಷನ್ ಪೀಪಲ್ ಫಾರ್ ಎಥಿಕಲ್ ಟ್ರಿಟ್ಮೆಂಟ್ ಆಫ್ ಅನಿಮಲ್ಸ್ ಸಹಯೋಗದಲ್ಲಿ ಪ್ರಾಣಿ ಸೇವೆಯನ್ನು ಮಾಡುತ್ತಿದ್ದಾರೆ( PETA). ಸದ್ಯಕ್ಕೆ ತ್ರಿಶಾ ಭೂಲೋಗಂ ಅಂಬೋ ತಮಿಳು ಸಿನಿಮಾ , ರಂ ತೆಲುಗು ಸಿನಿಮಾಗಳ ಶೂಟಿಂಗ್ ನಲ್ಲೂ ಬ್ಯುಸಿ ಆಗಿದ್ದಾರೆ. ಎಂಡ್ರೆಂಡ್ರುಂ ಪುನ್ನಗೈ ಚಿತ್ರವು ಬಿಡುಗಡೆಗಾಗಿ ಕಾದಿದೆ. ಎರಡು ಕತ್ತೆಗಳಿಗೆ ತ್ರಿಶಾ ಆಹಾರ ತಿನ್ನಿಸುತ್ತಿರುವ ಪೋಸ್ಟರ್ ಈಗ ಎಲ್ಲಡೆ ಕಾಣುತ್ತಿದೆ.ಅದಕ್ಕೆ ಸಂಬಂಧಿಸಿದಂತೆ ವಾಟ್ಟ ಕಿಕ್ ಆಸ್ ಡೇ ಎಂದು ಖುಷಿಯಾಗಿ ಟ್ವೀಟ್ ಮಾಡಿದ್ದಾರೆ ತ್ರಿಶಾ ಮ್ಯಾಮ್ !