ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

Sampriya

ಸೋಮವಾರ, 7 ಜುಲೈ 2025 (22:41 IST)
Photo Credit X
ಅಸ್ಸಾಂ ಮೂಲದ ಸೋಶಿಯಲ್ ಮೀಡಿಯಾ ಇನ್ಪುಯೆನ್ಸರ್‌ ಬೇಬಿಡಾಲ್ ಆರ್ಚಿ ಎಂದೇ ಖ್ಯಾತರಾಗಿರುವ ಅರ್ಚಿತಾ ಫುಕನ್ ಸದ್ಯ ಸುದ್ದಿಯಲ್ಲಿದ್ದಾರೆ. ಇದೀಗ ಅರ್ಚಿತಾ ಅಮೆರಿಕದಲ್ಲಿ ನೀಲಿಚಿತ್ರಗಳ ಉದ್ಯಮಕ್ಕೆ ಇಳಿದಿದ್ದಾರೆ ಎಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಸಿಕ್ಕಿರುವ ಮಾಹಿತಿ ಪ್ರಕಾರ ಇಂಟರ್‌ನೆಟ್‌ನಲ್ಲಿ ಬೇಬಿ ಡಾಲ್ ಅರ್ಚಿ ಹಾಗೂ ಅರ್ಚಿತಾ ಫುಕಾನ್ ಎಂಬ ಹೆಸರು ಹೆಚ್ಚು ಸರ್ಚ್‌ ಎಂಜಿನ್‌ಗಳಲ್ಲೂ ಹುಡುಕಾಟವಾಗುತ್ತಿದೆ ಎನ್ನಲಾಗಿದೆ. 

ಇದಕ್ಕೆ ಕಾರಣ ಆಕೆ ಇನ್‌ಸ್ಟಾಗ್ರಾಂನಲ್ಲಿ ಖ್ಯಾತ ನೀಲಿಚಿತ್ರಗಳ ತಾರೆ ಕೆಂಡ್ರಾ ಲಸ್ಟ್‌ ಅವರ ಜತೆ ಫೋಟೋವನ್ನು ಹಂಚಿಕೊಂಡಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ. 

ಇದನ್ನು ನೋಡಿದ ನೆಟ್ಟಿಗರು ಅಸ್ಸಾಂ ಮೂಲದ ಬೆಡಗಿ ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ ಎಂದಿದ್ದಾರೆ. 

‘ಮೊದಲ ಬಾರಿಗೆ ಕೆಂಡ್ರಾಳನ್ನು ಭೇಟಿಯಾದದ್ದು ನಿಜಕ್ಕೂ ಮರೆಯಲಾಗದ ಅನುಭವ. ಅವರ ಆತ್ಮವಿಶ್ವಾಸ, ವೃತ್ತಿಪರತೆ ಮತ್ತು ಯಶಸ್ಸಿನಿಂದ ನಾನು ಪ್ರೇರಿತಳಾದೆ. ಅವರು ಒಬ್ಬ ಪ್ರೋತ್ಸಾಹದಾಯಕರು ಮತ್ತು ಉತ್ತಮ ಜೀವನದತ್ತ ಹೋಗುವ ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು. ಅಂತಹ ತಾರೆಯ ಸಂಪರ್ಕ ಸಾಧಿಸಲು ಮತ್ತು ಕಲಿಯಲು ಅವಕಾಶ ನೀಡಿದ್ದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ‘ ಎಂದು ಅರ್ಚಿತಾ ಫುಕಾನ್ ಅವರು ತಮ್ಮ ವೆರಿಫೈಡ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನೊಂದು ಪೋಸ್ಟ್‌ನಲ್ಲಿ, ‘ನಾನು ಪ್ಲೆಬಾಯ್‌ ಮ್ಯಾಗ್‌ಜಿನ್‌, ವೆಬ್‌ಸೈಟ್‌ಗೆ (ವಯಸ್ಕರರಿಗೆ ಮೀಸಲಿರುವ) ಒಳಉಡುಪುಗಳ ಮಾಡೆಲ್‌ ಆಗಿ ಆಯ್ಕೆಯಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಇನ್‌ಸ್ಟಾಗ್ರಾಂ ಹಾಗೂ ಎಕ್ಸ್‌ ಖಾತೆಯಲ್ಲಿ ತಮ್ಮ ಬೋಲ್ಡ್ ಚಿತ್ರಗಳನ್ನು, ವಿಡಿಯೊಗಳನ್ನು ಹಂಚಿಕೊಂಡಿರುವ ಅರ್ಚಿತಾ ಐಪಿಎಲ್‌ನ ಆರ್‌ಸಿಬಿ ಜರ್ಸಿಯಲ್ಲಿ ಇರುವ ಫೋಟೊಗಳನ್ನೂ ಹಂಚಿಕೊಂಡಿದ್ದಾರೆ. ತಾನೊಬ್ಬ ಆರ್‌ಸಿಬಿ ಅಭಿಮಾನಿ ಎಂದು ಈ ಹಿಂದೆ ಫೋಸ್ಟ್ ಹಂಚಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ