ಪ್ರಿಯಾಂಕ ಚೋಪ್ರ ಕ್ಲೋಸ್ ಫ್ರೆಂಡ್ಸ್ ಯಾರು ಗೊತ್ತೇ?

ಬುಧವಾರ, 5 ಫೆಬ್ರವರಿ 2014 (09:56 IST)
PR
ಪ್ರಿಯಾಂಕ ಚೋಪ್ರ ಅತ್ಯಂತ ಒಳ್ಳೆಯ ಫ್ರೆಂಡ್ ಗಳು ಯಾರು ಗೊತ್ತೇ.. ಅವರು ಬೇರೆ ಯಾರು ಅಲ್ಲ ಗೂಂಡೆ ಚಿತ್ರದಲ್ಲಿ ಆಕೆಯೊಂದಿಗೆ ನಟಿಸಿರುವ ಅರ್ಜುನ್ ಕಪೂರ್ ಮತ್ತು ರಣವೀರ್ ಸಿಂಗ್ . ಈ ಮುವ್ವರು ನಟಿಸಿರುವ ಗೂಂಡೆ ಯು ಫೆಬ್ರವರಿ ಹದಿನಾಲ್ಕರಂದು ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಈ ಮುವ್ವರು ಗೆಳೆಯರ ನಡುವಿನ ಬಾಂಧವ್ಯ ತೋರಲಾಗುತ್ತದೆ. ಖಂಡಿತ ಇದೊಂದು ಭಿನ್ನ ಪ್ರಯೋಗ.

ನೋಡಿದವರಿಗೆ ಅರ್ಥ ಆಗುತ್ತದೆ ಇದರ ವಿಶೇಷತೆ. ನಾನು ಈಗಾಗಲೇ ಇಬ್ಬರು ಹೀರೋಗಳು ಇರುವಂತಹ ಚಿತ್ರಗಳಲ್ಲಿ ಈಗಾಗಲೇ ನಟಿಸಿದ್ದೇನೆ. ಆದರೆ ನನಗೆ ಈ ಚಿತ್ರವೂ ಹೆಚ್ಚಿ ವಿಶೇಷ ಅನ್ನಿಸಿದೆ ಎನ್ನುವ ಮಾತನ್ನು ಪ್ರಾಮಾಣಿಕವಾಗಿ ಹೇಳಿದ್ದಾಳೆ ಈ ಚೆಲುವೆ. ನಿಜ ಬದುಕಲ್ಲೂ ಸಹ ನನಗೆ ಇವರಿಬ್ಬರು ಒಳ್ಳೆಯ ಫ್ರೆಂಡ್ಸ್.. ತೆರೆಯ ಮೇಲು ಅದೇ ರೀತಿ ನಟಿಸಿರುವುದಕ್ಕೆ ಹೆಚ್ಚು ಆಪ್ತ ಅನ್ನಿಸಿದೆ ಎನ್ನುವ ಅಂಬೋಣ ಆಕೆಯದ್ದಾಗಿದೆ.

ಈ ಚಿತ್ರದಲ್ಲಿ ನಟಿಸಿರುವ ಈ ಹೀರೋಗಳ ಗುಣ ಅವರ ಪಾತ್ರಕ್ಕಿಂತ ತುಂಬಾ ಭಿನ್ನವಾಗಿದೆ.ಎನ್ನುವ ಮಾತು ಹೇಳುತ್ತಾ ಈ ಇಬ್ಬರ ಜೊತೆ ಸಮಯ ಚೆನ್ನಾಗಿ ಕಳೀತಂತೆ ಸೆಟ್ ನಲ್ಲಿ ಎಂದು ಹೇಳಿದ್ದಾಳೆ.

ವೆಬ್ದುನಿಯಾವನ್ನು ಓದಿ