ಬಿಗ್‌ಬಾಸ್‌ 7ರಲ್ಲಿ ನಟಿಸಲು ಹಾಟ್ ನಟಿ ಪೂನಂ ಪಾಂಡೆಗೆ 2.5 ಕೋಟಿ ರೂ. ಆಫರ್?

ಸೋಮವಾರ, 31 ಮಾರ್ಚ್ 2014 (15:52 IST)
ಯುವಕರ ಹೃದಯದಲ್ಲಿ ಕಿಚ್ಚೆಬ್ಬಿಸಿದ ಮಾಡೆಲ್- ನಟಿ ಪೂನಂ ಪಾಂಡೆಗೆ ಬಿಗ್‌ಬಾಸ್ 7 ರಲ್ಲಿ ನಟಿಸಲು 2.5 ಕೋಟಿ ರೂ. ಸಂಭಾವನೆ ನೀಡುವುದಾಗಿ ಬಿಗ್‌ಬಾಸ್ ಅಡಳಿತ ಮಂಡಳಿ ಆಹ್ವಾನ ನೀಡಿದೆ.

ಬಿಗ್‌ಬಾಸ್‌ನಲ್ಲಿ ನಟಿಸುವಂತೆ ಪೂನಂ ಪಾಂಡೆಗೆ ಆಫರ್ ನೀಡಿದಾಗಿ, ಪೂನಂ 3 ಕೋಟಿ ರೂಪಾಯಿ ನೀಡಿದರೆ ಮಾತ್ರ ಬಿಗ್‌ಬಾಸ್‌ನಲ್ಲಿ ಪಾಲ್ಗೊಳ್ಳುವುದಾಗಿ ಷರತ್ತು ವಿಧಿಸಿದ್ದಾಳೆ. ಕಡೆಗೂ ಮೀನಾ ಮೇಷ ಎಣಿಸಿದ ಅಡಳಿತ ಮಂಡಳಿ 2.5 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಹೇಳಿದೆ. ಆದರೆ, ಪೂನಮ್ ಕ್ಷಮಿಸಿ ನಾನು ತುಂಬಾ ಬಿಜಿ ಎಂದು ಆಫರ್ ತಿರಸ್ಕರಿಸಿದ್ದಾಳೆ.

ಬಿಗ್‌ಬಾಸ್‌ನಲ್ಲಿ ನಟಿಸುವಂತೆ ಪೂನಂ ಪಾಂಡೆಗೆ ಈ ಹಿಂದೆ ಕೂಡಾ ಮೂರು ಬಾರಿ ಆಫರ್ ನೀಡಲಾಗಿತ್ತು. ಆದರೆ, ಪೂನಂ ಕ್ಯಾರೆ ಎನ್ನಲಿಲ್ಲ. ಇದೀಗ ಬಿಗ್‌ಬಾಸ್‌ನ 7ನೇ ಸೀಜನ್‌ನಲ್ಲಿ ನಟಿಸುವಂತೆ ನೀಡಿದ ಆಫರ್ ತಿರಸ್ಕರಿಸಿ ಐಯಾಮ್ ಬಿಜಿ ಎಂದಿದ್ದಾರಂತೆ.

ಪೂನಂ ಪಾಂಡೆ ಈ ಹಿಂದೆ ಖತ್ರೋಂಕಿ ಕಿಲಾಡಿ 4 ರಿಯಲ್ಟಿ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಾಟ್ ನಟಿ ಪೂನಂ ನಟಿಸಿದ ನಶಾ ಚಿತ್ರ ರಸಿಕ ಅಭಿಮಾನಿಗಳ ಬಿಸಿ ಬಿಸಿ ಹೃದಯವನ್ನು ತಣಿಸಿತ್ತು.

ವೆಬ್ದುನಿಯಾವನ್ನು ಓದಿ