ರಣವೀರ್ ಸಿಂಗ್ ಗೆ ಪ್ರಿಯಾಂಕ ಚೋಪ್ರ ಕಂಡ್ರೆ ತುಂಬಾ ಇಷ್ಟವಂತೆ !

ಶುಕ್ರವಾರ, 14 ಫೆಬ್ರವರಿ 2014 (09:49 IST)
PR
ನಟ ರಣವೀರ್ ಸಿಂಗ್ ಸಹನಟಿ ಪ್ರಿಯಾಂಕ ಚೋಪ್ರ ಬಗ್ಗೆ ಸಿಕ್ಕಾಪಟ್ಟೆ ಅಭಿಮಾನದ ಮಾತುಗಳನ್ನು ಆಡಿದ್ದಾರೆ.

ಆಕೆ ಸೆಟ್ ನಲ್ಲಿ ಇದ್ದಾಗ ತುಂಬಾ ಪರ್ಫೆಕ್ಟ್ ಅನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದಾರೆ ರಣವೀರ್. ನನಗೆ ಪ್ರಿಯಾಂಕ ಯಾಕೆ ಇಷ್ಟ ಆಗ್ತಾರೆ ಅಂದ್ರೆ, ಆಕೆ ತಾನು ಮಾಡುವ ಕೆಲಸದ ಸ್ಥಳದಲಿ ಜೊತೆಗೆ ಇರುವವರ ಕೆಲಸವನ್ನು ಸಹ ಸುಗುಮ ಮಾಡುತ್ತಾರೆ ಎನ್ನುವ ಮಾತನ್ನು ಕಾಲೇಜ್ ಒಂದರಲ್ಲಿ ಚಿತ್ರದ ಪ್ರಮೋಶನ್ ಗೆಂದು ಹೋದಾಗ ತಿಳಿಸಿದ್ದಾರೆ.

ಈಕೆ ನಟರಿಗೆ, ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಆಪ್ತ ವಾತಾವರಣ ಕಲ್ಪಿಸುತ್ತಾರೆ. ತನ್ನ ಅನುಭವದಿಂದ ಎಲ್ಲರ ಕೆಲಸ ಸುಲಭ ಮಾಡುತ್ತಾರೆ. ಈಕೆ ಒನ್ ಟೇಕ್ ನಟಿ ಎನ್ನುವ ಮೆಚ್ಚುಗೆಯ ಮಾತನ್ನು ಆಡಿದ್ದಾರೆ ರಣವೀರ್.ಇಂದು ಅವರಿಬ್ಬರೂ ನಟಿಸಿರುವ ಗುಂಡೇ ಚಿತ್ರ ಬಿಡುಗಡೆ ಆಗುತ್ತಿದೆ.
ಗಲಿಯೊಂಕಿ ರಾಸಲೀಲ ರಾಮ್ ಲೀಲ ಚಿತ್ರದ ನಟನೆಗಾಗಿ ರಣವೀರ್ ಬೆಸ್ಟ್ ಆಕ್ಟರ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ರಾಮಲೀಲಾ ಚಿತ್ರದಲ್ಲೂ ಸಹ ಇವರಿಬ್ಬರು ಒಟ್ಟಾಗಿ ನಟಿಸಿದ್ದರು. ಲೇಡೀಸ್ v /s ರಿಕಿ ಬಹ್ಲ್ ಚಿತ್ರದಲ್ಲಿ ರಣವೀರ್ ಪಿಗ್ಗಿ ಕಸಿನ್ ಪರಿಣಿತಾ ಜೊತೆ ನಟಿಸಿದ್ದಾರೆ.
ಗುಂಡೇ ಚಿತ್ರದಲ್ಲಿ ಇವರಿಬ್ಬರ ಜೊತೆ ಅರ್ಜುನ್ ಕಪೂರ್ ಸಹ ನಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ