ಶೃಂಗಾರ ರಸಭರಿತ ಪ್ರೇಮ ಕಾವ್ಯ ರಾಮ್ ಲೀಲಾ

ಸೋಮವಾರ, 31 ಮಾರ್ಚ್ 2014 (18:58 IST)
ಹಂ ದಿಲ್ ದೇ ಚುಕೆ ಸನಮ್, ದೇವ್ ದಾಸ್, ಬ್ಲಾಕ್, ಗುಜಾರಿಷ್ ನಂತಹ ಸಿನಿಮಾಗಳು ಭಾರಿ ಬಡ್ಜೆಟ್ ಗಳು ಮತ್ತು ಅದ್ಭುತ ಸೆಟ್ಟಿಂಗ್ ಗಳಿಂದ ಫೇಮಸ್ ಆಗಿತ್ತು. ಅಂತಹ ಸಿನಿಮಾಗಳನ್ನು ನಿರ್ಮಿಸಲು ಸಾಧ್ಯವಾಗುವ ಏಕೈಕ ವ್ಯಕ್ತಿ ಅಂದ್ರೆ ಸಂಜಯ್ ಲೀಲಾ ಬನ್ಸಾಲಿ. ಈಕೆ ಬಿಡುಗಡೆ ಆಗಿರುವ ರಾಮ್ ಲೀಲಾ ಸಹ ಅದೇ ಸಾಲಿಗೆ ಸೇರ್ಪಡೆಯಾಗಿದೆ.

ಹಿಂಸೆ, ಸಿಡಿ ಮದ್ದುಗಳ ಮದ್ದಳೆ, ಗಲಾಟೆಯಿಂದ ತುಂಬಿರುವ ಊರೊಂದರಲ್ಲಿ ಒಂದು ಜೋಡಿ ಆಕರ್ಷಣೆಗೆ ಒಳಗಾಗುತ್ತಾರೆ. ಅದು ಪ್ರೀತಿಯಾಗಿ ಮಾರ್ಪಡುತ್ತದೆ. ಅದನ್ನು ಉಳಿಸಿಕೊಳ್ಳುವುದಿದೆಯಲ್ಲ ಅದರಷ್ಟು ಕಷ್ಟದ ಕೆಲಸ ಬೇರೋಂದಿಲ್ಲ.ರಾಮ್ ಅನ್ನೋ ಯುವಕ ಲೀಲಾ ಹೆಸರಿನ ಯುವತಿ ಇಬ್ಬರೂ ಪ್ರೀತಿಸಿ ಕೊಳ್ತಾರೆ. ಆದರೆ ಅವರಿಬ್ಬರ ಪ್ರೀತಿಯನ್ನು ಅನೇಕ ರೀತಿಯಲ್ಲಿ ಅಡ್ಡಿ ಪಡಿಸುತ್ತಾರೆ ಹಿರಿಯರು. ಅದನ್ನು ಕೊನೆಗೆ ಯಾವರೀತಿ ದಕ್ಕಿಸಿಕೊಳ್ಳುತ್ತಾರೆ ನಮ್ಮ ಕಥಾ ನಾಯಕ ಎನ್ನುವುದೇ ಕ್ಲೈಮ್ಯಾಕ್ಸ್ . ಅಂದವಾಗಿ, ವಿಭಿನ್ನ ರೀತಿಯಲ್ಲಿ ಚಿತ್ರವನ್ನು ನಿರೂಪಿಸಿದ್ದಾರೆ ನಿರ್ದೇಶಕರು.ಇದರಲ್ಲಿ ಸಂಗೀತವೂ ಹೈಲೈಟ್ ಆಗಿದೆ. ಅಬ್ಬರ -ಅದ್ದೂರಿತನ ಜನಮನ ಸೆಳೆಯುತ್ತದೆ. ರಾಮ್ ಪಾತ್ರದಲ್ಲಿ ನಟಿಸಿರುವ ರಣವೀರ್ ಗೆ ಈ ಚಿತ್ರವು ಒಳ್ಳೆಯ ತಿರುವು ನೀಡಿದೆ . ಈ ಮೊದಲು ನಟಿಸಿದ್ದ ಲುಟೇರಾ, ಬ್ಯಾಂಡ್ ಬಾಜಾ ಬಾರಾತ್ ಚಿತ್ರಗಳು ರಣವೀರ್ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ನೀಡಿರಲಿಲ್ಲ. ಆದರೆ ರಾಮ್ ಲೀಲಾ ಈ ನಟನ ತಾರ ಗತಿಯನ್ನು ಬದಲಾಯಿಸುವುದರಲ್ಲಿ ಸಂಶಯವಿಲ್ಲಾ.ಮುಖ್ಯವಾಗಿ ತನ್ನ ಸಿಕ್ಸ್ ಪ್ಯಾಕ್ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ ರಣವೀರ್.ಗೆಲುವಿನ ರಾಣಿ ಆಗಿರುವ ದೀಪಿಕ ಈ ಚಿತ್ರದಲ್ಲಿ ಅಪರೂಪದ ರೂಪಸಿರಿಯಂತೆ ಕಂಡಿದ್ದಾರೆ.

ತನ್ನ ಹಿಟ್ ಚಿತ್ರಗಳ ಲಿಸ್ಟ್ ನಲ್ಲಿ ರಾಮ್ ಲೀಲಾವನ್ನೂ ಸಹ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಡಿಪ್ಪಿ.ಆರಂಭದಲ್ಲಿ ಕರಿನಾ ಇಲ್ಲ ವೇ ಪ್ರಿಯಾಂಕ ಚೋಪ್ರ ನಟಿಸುವ ಬಗ್ಗೆ ಸುದ್ದಿ ಇತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯ ಆಗಿರಲಿಲ್ಲ. ಆದರೆ ಈಗ ಅವರು ಕೈ ಹಿಸುಕಿ ಕೊಳ್ಳುವಷ್ಟು ಯಶಸ್ಸು ನೀಡುವಂತಿದೆ ಚಿತ್ರ. ಮುಖ್ಯವಾಗಿ ದೀಪಿಕಾ ನಟಿಸಿರುವ ಶೃಂಗಾರ ರಸಮಯ ದೃಶ್ಯಗಳು ಮನಸೆಳೆಯುವಂತಿದೆ. ಈ ಚಿತ್ರದ ಮುಖ್ಯ ಆಕರ್ಷಣೆ ಕಾಸ್ಟೂಮ್ಸ್. ಒಂದು ಹಾಡಲ್ಲಿ ದೀಪಿಕಾ 30 ಕೆಜಿ ತೂಕದ ಗಾಗ್ರ ಧರಿಸಿದ್ದಾರೆ. ಅಂಜು ಮೋದಿ ಮತ್ತು ಮ್ಯಾಕ್ಸಿಮಾ ಕಾಸ್ಟೂಮ್ ಡಿಸೈನರ್ ಗಳಾಗಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿರುವವರು ಮಾಂಟಿ ಶರ್ಮ .ರಂಗ್ ಲಗಾದೆ, ತತ್ತಡ್ ತತ್ತಡ್, ಸೇರಿದಂತೆ ಎಲ್ಲಾ ಹಾಡುಗಳು ಮನ ಸೆಳೆಯುತ್ತದೆ.

ವೆಬ್ದುನಿಯಾವನ್ನು ಓದಿ