ಸನ್ನಿಲಿಯೋನ್ @ ಬೆಂಗಳೂರು ಟ್ರಾಫಿಕ್!

ಸೋಮವಾರ, 31 ಮಾರ್ಚ್ 2014 (19:45 IST)
ಮಾದಕ ಮೈ ಸುಂದರಿ ಸನ್ನಿ ಲಿಯೋನ್ ಗೆ ಬೆಂಗಳೂರಿನ ಟ್ರಾಫಿಕ್ ನ ತೀವ್ರತೆ ಅರಿವು ಆಗಿದೆ. ಸಾಮಾನ್ಯವಾಗಿ ಬೆಂಗಳೂರಿಗರು ಈ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವುದು ಎಲ್ಲರಿಗೂ ಗೊತ್ತು.

ಆದರೇ ಈ ನಟಿ ಅದ್ಯಾಕೆ ನಮ್ಮೂರಿಗೆ ಬಂದು ಪರದಾಡ ಬೇಕಾಯ್ತು ಎಂದು ಬೆಂಗಳೂರಿಗರು ತಿಳಿಯುವುದು ಸಹಜ. ಅದಕ್ಕೂ ಕಾರಣವಿದೆ. ಬೆಂಗಳೂರಿನಲ್ಲಿ ಆಕೆ ತನ್ನ ಹೊಸ ಚಿತ್ರ ಜಾಕ್ ಪಾಟ್ ನ ಪ್ರಮೋಷನ್ ಗೆಂದು ಬಂದಿದ್ದಳು.ಕೇವಲ ಐದು ನಿಮಿಷಕ್ಕೆ ತಲುಪಬೇಕಾದ ಫೈವ್ ಸ್ಟಾರ್ ಹೋಟಲ್ ಗೆ ಆಕೆ ತಲುಪಿದ್ದು ಅರ್ಧಗಂಟೆಗೆ! ಎಂಜಿ ರಸ್ತೆಯಲ್ಲಿದ್ದ ಆ ಹೋಟೆಲ್ ಗೆ ತಲುಪಲು ತಾವು ಬರೋಬ್ಬರಿ ಅರ್ಧ ಗಂಟೆಗಳ ಕಾಲ ತೆಗೆದು ಕೊಂಡೆವು ಎಂದು ಆಕೆಯ ಸಹನಟ ಸಚಿನ್ ಜೋಶಿ ತಿಳಿಸಿದ್ದಾರೆ.

ಎಲ್ಲಾ ಸರಿಯಾಯ್ತು ಎಂದು ಹೋಟೆಲ್ ಬಾಗಿಲ ಬಳಿ ಬಂದಾಗ ಅಲ್ಲಿದ್ದ ಸೆಕ್ಯೂರಿಟಿಯರು ತಡೆದು ಕಾಲುಗಂಟೆಗಳ ಕಾಲ ನಿಲ್ಲುವಂತೆ ಮಾಡಿದರಂತೆ. ಹೀಗೆ ಕಾಯುವ ಸಹನೆಯನ್ನು ಬೆಂಗಳೂರು ಸನ್ನಿಗೆ ಬೆಳಸಿತು.

ವೆಬ್ದುನಿಯಾವನ್ನು ಓದಿ