ಸನ್ನಿ ಲಿಯೋನ್ ಜೀವನ ಕುರಿತು ಡಾಕ್ಯುಮೆಂಟರಿ ಚಿತ್ರ

ಸೋಮವಾರ, 31 ಮಾರ್ಚ್ 2014 (16:49 IST)
ಸನ್ನಿ ಲಿಯೋನ್ ಕುರಿತು ಡಾಕ್ಯುಮೆಂಟರಿ ಚಿತ್ರವೊಂದನ್ನು ತಯಾರಿಸಲು ಖ್ಯಾತ ಫೊಟೊ ಜರ್ನಲಿಸ್ಟ್ ದಿಲೀಪ್ ಮೆಹತಾ ಮುಂದಾಗಿದ್ದಾರಂತೆ. ಈ ಬಗ್ಗೆ ಈಗಾಗಲೇ ಸನ್ನಿ ಜತೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಸನ್ನಿ ನೀಲಿ ಚಿತ್ರಗಳ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟವರು. ಜಿಸ್ಮ್ 2 ಚಿತ್ರದಲ್ಲಿ ಅವಕಾಶ ಸಿಗುತ್ತಲೇ ಭಾರತದಲ್ಲೇ ನೆಲೆಸಲು ನಿರ್ಧರಿಸಿದರು. ಅವರ ಪತಿ ಡೇನಿಯಲ್ ವೆಬರ್ ಕೂಡಾ ಇದಕ್ಕೆ ಸಮ್ಮತಿ ನೀಡಿದ್ದಾರೆ.

ಆಕೆಯ ಬದುಕು ಎಲ್ಲರಂತಿಲ್ಲ. ಅಂತಹದ್ದೊಂದು ಬದುಕು ಹೇಗಿರುತ್ತದೆ. ಆಕೆ ಯಾವ ರೀತಿ ನೀಲಿ ಚಿತ್ರರಂಗಕ್ಕೆ ಕಾಲಿಟ್ಟಳು, ಯಾವ ಸಂದರ್ಭದಲ್ಲಿ ಅದು ಅನಿವಾರ್ಯವಾಯಿತು, ಅಲ್ಲಿ ಏನೇನು ನೋವು ಅನುಭವಿಸಿದಳು ಎಂಬುದನ್ನು ನಾವು ತೋರಿಸುತ್ತೇವೆ ಎಂದಿದ್ದಾರೆ ದಿಲೀಪ್. ಅಂದಹಾಗೆ ಈ ಡಾಕ್ಯುಮೆಂಟರಿಯನ್ನು ದಿಲೀಪ್ ಸೋದರಿ ಕಮ್ ನಿದರ್ೇಶಕಿ ದೀಪಾ ಮೆಹತಾ ನಿಮರ್ಿಸುತ್ತಿದ್ದಾರೆ. ಬಾಲಿವುಡ್ ನಟಿಯರಿಗೆ ಈವರೆಗೆ ಸಿಗದ ಅವಕಾಶ ಸನ್ನಿಗೆ ಸಿಕ್ಕಿದೆ. ಇದಕ್ಕಾಗಿ ಅಲ್ಲಿನ ನಟಿಯರೆಲ್ಲಾ ಸನ್ನಿ ಕಡೆಗೆ ಅಚ್ಚರಿಯಿಂದ ಹಾಗೂ ಅಸೂಯೆಯಿಂದ ನೋಡುತ್ತಿದಾರಂತೆ. ಅಂದ ಹಾಗೆ ಸನ್ನಿ ಈಗಾಗಲೇ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಜಾಕ್ಪಾಟ್ ಚಿತ್ರೀಕರಣ ಮುಗಿದಿದ್ದರೆ ಟೀನಾ ಆಂಡ್ ಲೋಲೊ ಮತ್ತು ರಾಗಿಣಿ ಎಂಎಎಂಎಸ್ 2 ಚಿತ್ರೀಕರಣ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ