ಹಾಗಾದ್ರೆ ಸಿಂಬು-ಹನ್ಸಿಕ ಜೊತೆ ಈಗ ಲವ್ ಮಾಡ್ತಾ ಇಲ್ವಾ !

ಶುಕ್ರವಾರ, 28 ಫೆಬ್ರವರಿ 2014 (10:07 IST)
PR
ಕಾಲಿವುಡ್ ಇಂಡಸ್ಟ್ರಿ ಯಲ್ಲಿ ಅಫೇರ್ ಅನ್ನುವ ಬಾಲಿವು ಸಂಪ್ರದಾಯಕ್ಕೆ ನಾಂದಿ ಹಾಡಿದವರು ಬೇರೆ ಯಾರು ಅಲ್ಲ ಸಿಂಬು ಎಂದೇ ಹೇಳ ಬಹುದಾಗಿದೆ.ಆವರೆಗೂ ಅಂತಹ ಅಫೇರ್ಗಳು ಇದ್ದರು ಸಹ ಅವೆಲ್ಲ ಗುಟ್ಟು ಗುಟ್ಟಾಗಿ ನಡೆಯುತ್ತಿತ್ತು.

ಆದರೆ ಕ್ರಮೇಣ ಅವುಗಳು ಹೊರಗೆ ಬರದೆ ಅಲ್ಲಿಯೇ ಉಳಿದು ಬಿಡುವ ಸಾಧ್ಯತೆಗಳು ಸಹ ಹೆಚ್ಚಾಗಿತ್ತು. ಆದರೆ ಸಿಂಬು ಈ ಚಿತ್ರರಂಗದಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಬಂದು ಆಬಳಿಕ ಯಶಸ್ಸಿನ ಹಾದಿಯಲ್ಲಿ ನಡೆಯುವಾಗ ಹೊಸದೊಂದು ಪರಂಪರೆಯನ್ನು ಹುಟ್ಟು ಹಾಕಿದ್ದು ಮಾತ್ರ ಯಾರು ಮರೆಯಲಾಗದ್ದು ಎಂದೇ ಹೇಳ ಬಹುದಾಗಿದೆ.

ವೆಬ್ದುನಿಯಾವನ್ನು ಓದಿ