ಅನುಷ್ಕ ಗೆ ಈಗ ಕೈ ತುಂಬಾ ಕೆಲಸ.. ಆಕೆ ಟಾಲಿವುಡ್ ಚಿತ್ರರಂಗದ ಅನಭಿಷಿಕ್ತ ರಾಣಿ ಅಂತಾನೆ ಹೇಳ ಬಹುದು. ಕನ್ನಡದ ಈ ಅನುಷ್ಕಾ ಶೆಟ್ಟಿ ಗೆದ್ದಿರುವುದು ಟಾಲಿವುಡ್ ಚಿತ್ರರಂಗದಲ್ಲಿ. ಆಕೆಯು ಅಲ್ಲಿನ ಹಾಟ್ ಫೆವರಿಟ್ ನಟಿ ಎಂದೇ ಹೇಳ ಬಹುದಾಗಿದೆ. ಅಲ್ಲಿ ಅನುಷ್ಕ ಕ್ರೇಜಿ ಪ್ರಾಜೆಕ್ಟ್ ಮಾಡುತ್ತಿರುವ ಪ್ರತಿಭಾವಂತ ನಟಿ. ಏಕೆಂದರೆ ಟಾಲಿವುಡ್ ನ ಚರಿತ್ರೆಯಲ್ಲಿ ಚಿರಸ್ಥಾಯಿ ಆಗುವಂತಹ ಪ್ರಾಜಕ್ಟ್ಗಳಲ್ಲಿ ಆಕೆ ನಟಿಸುತ್ತಿದ್ದಾಳೆ. ಅದೂ ಒಂದಲ್ಲ ಎರಡು ಪ್ರಾಜಕ್ಟ್ ನಲ್ಲಿ !
ಒಂದು ರಾಜ ಮೌಳಿ ಅವರ ಭಾರಿ ಬಜೆಟ್ಟಿನ ಚಿತ್ರ ಬಾಹುಬಲಿ . ಎರಡನೆಯದ್ದು ಗುಣ ಶೇಖರ್ ನಿರ್ಮಾಣ -ನಿರ್ದೇಶನದ ರುದ್ರಮದೇವಿ. ಈ ಎರಡು ಚಿತ್ರಗಳಲ್ಲಿ ಅನುಷ್ಕ ಮುಖ್ಯ ಪಾತ್ರಧಾರಿ. ಆದರೆ ಈ ಎರಡು ಚಿತ್ರಗಳಿಂದ ಆಕೆಯ ಅನೇಕ ಅವಕಾಶಗಳು ದೂರ ಆಗಿವೆ ಎನ್ನುವುದು ಸತ್ಯವಾದ ಸಂಗತಿ.
PR
ಈ ಎರಡು ಚಿತ್ರಗಳಿಂದ ದೊರಕುವ ಮೊತ್ತವು ಎಷ್ಟಿದೆಯೋ ಅದಕ್ಕಿಂತ ಹೆಚ್ಚಿನ ಸಂಭಾವನೆಯನ್ನು ಆಕೆ ಈಗಾಗಲೇ ಬಿಟ್ಟಿರುವ ಪ್ರಾಜೆಕ್ಟ್ ಗಳಿಂದ ಪಡೆಯುತ್ತೇನೆ ಎಂದು ಹೇಳಿದ್ದಾಳೆ ಈ ಚೆಲುವೆ. ಬಾಹುಬಲಿ ಚಿತ್ರಕ್ಕೆ ಸಹಿ ಹಾಕಿದ ಒಂದು ವರ್ಷದ ಬಳಿಕ ಇಂತಹ ಮಾತು ಆದಿ ರಾಜ ಮೌಳಿ ಅವರ ಎದೆಯಲ್ಲಿ ನಡುಕ ಹುಟ್ಟಿಸಿದ್ದಾಳೆ ಏಕೆ.
ಅಲ್ಲದೆ ತಾನು ಈ ಪ್ರಾಜೆಕ್ಟ್ ನಲ್ಲಿ ನಟಿಸಲಾರೆ ಎನ್ನುವ ಮಾತನ್ನು ಆದಿ ರಾಜಮೌಳಿ ನಿದ್ದೆ ಕೆಡಿಸಿದ್ದಾಳೆ. ಹಾಗೆ ಮಾಡ ಬೇಡಮ್ಮ ಇದು ನನ್ನ ಬಹು ನಿರೀಕ್ಷಿತ ಚಿತ್ರ ಎಂದೆಲ್ಲ ಹೇಳಿ ರಾಜ ಮೌಳಿ ಆಕೆಗೆ ಸಮಾಧಾನ ಮಾಡಿದ್ಸಾರೆ ಎನ್ನುವುದು ಈಗಿರುವ ಹಾಟ್ ಟಾಪಿಕ್ ಆಗಿದೆ. ಆದರೆ ಟಾಲಿವುಡ್ ನಲ್ಲಿ ಈ ಸುದ್ದಿ ಜಾಸ್ತಿನೇ ಜೋರಾಗಿ ಕೇಳಿ ಬರುತ್ತಿದೆ. ಅಕಸ್ಮಾತ್ ಆ ಪ್ರಾಜೆಕ್ಟ್ ಬಿಟ್ಟರೆ ಅನುಷ್ಕ ಸ್ಥಾನಕ್ಕೆ ಯಾರು ಬರ ಬಹುದು? ಸದ್ಯಕ್ಕೆ ಹಾಗಾಗದಿರಲಿ ಎನ್ನುವುದೇ ಅನುಷ್ಕ ಅಭಿಮಾನಿಗಳ ಆಶಯ !