ಇರ್ಫಾನ್ ಬಾಲಿವುಡ್ ನ ವಿಶೇಷ ನಟರಲ್ಲಿ ಒಬ್ಬರು. ಅವರು ಕೇವಲ ಭಾರತದ ನಟರಲ್ಲ, ಹಾಲಿವುಡ್ ನಲ್ಲೂ ಸಹ ತಮ್ಮ ಪ್ರತಿಭೆ ತೋರುತ್ತಾ ಇರುವ ಕಲಾವಿದ. ಅವರು ಹಾಲಿವುಡ್ ಪ್ರಾಜೆಕ್ಟ್ ಸ್ಪೈಡರ್ ಮ್ಯಾನ್ ಮುಗಿಸಿದ ಬಳಿಕ ಮತ್ತೆ ಯಾವ ಪ್ರಾಜೆಕ್ಟ್ ಗೆ ಸಹಿ ಹಾಕ ಬಹುದು ಎನ್ನುವ ನಿರೀಕ್ಷೆ ಇತ್ತು,... ಭಾಗಶಃ ಅವರೀಗ ಜುರಾಸ್ಸಿ ಪಾರ್ಕ್ ನ ನಾಲ್ಕನೇ ಆವೃತ್ತಿಯ ಸಿನಿಮಾದಲ್ಲಿ ನಟಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಒಂದು ಮಾಹಿತಿ ಪ್ರಕಾರ ಅವರ ಬಳಿಗೆ ಆ ಸಂಗತಿ ಬಂದಿದ್ದು ಅದಿನ್ನು ಸದ್ಯಕ್ಕೆ ಫೈನಲೈಸ್ ಆಗಿಲ್ಲವಂತೆ.
ಜುರಾಸ್ಸಿ ಪಾರ್ಕ್ 4ಕ್ಕೆ ನನಗೆ ನಟಿಸಲು ಆಹ್ವಾನ ದೊರೆತಿದೆ . ಆದರೆ ಸದ್ಯಕ್ಕೆ ಆ ಚಿತ್ರಕ್ಕೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿಯನ್ನು ಸದ್ಯಕ್ಕೆ ತಿಳಿಸಲು ಆಗದು ಎಂದಿದ್ದಾರೆ ಇರ್ಫಾನ್.