ಕೈ ತಪ್ಪಿ ಹೋದ ಹಳೆಯ ಅವಕಾಶಗಳ ಬಗ್ಗೆ ಎಳ್ಳಷ್ಟು ಬೇಸರವಿಲ್ಲ .. ಕರೀನಾ ಕಪೂರ್

ಬುಧವಾರ, 19 ಮಾರ್ಚ್ 2014 (10:14 IST)
PR
PR
ಸೌಂದರ್ಯ, ಅಭಿನಯಿಸುವ ಸಾಮರ್ಥ್ಯ ಎರಡನ್ನು ಹೊಂದಿದ್ದರು ಕರೀನಾ ಕಪೂರ್ ಗೆ ಅದೃಷ್ಟ ಕೈ ಕೊಟ್ಟಿದೆ. ಈಗ ಆಕೆಯ ಗಮನ ಶುದ್ಧಿ ಮತ್ತು ಬಾಂಬೆ ಸಮುರಾಯ್ ಕಡೆಗೆ! ಆಕೆ ಬೇಡ ಎಂದು ಬಿಟ್ಟಿದ್ದ ಕ್ವೀನ್, ರಾಮ್ ಲೀಲ, ಚೆನ್ನೈ ಎಕ್ಸ್ ಪ್ರೆಸ್ , ಫ್ಯಾಶನ್,ಬ್ಲಾಕ್ ಸಿನಿಮಾಗಳು ಬಾಕ್ಸಾಫೀಸಿನಲ್ಲಿ ಹೊಸ ದಾಖಲೆ ಬರೆದಿತ್ತು. ತಾನು ಅಂತಹ ಅವಕಾಶಗಳನ್ನು ಬಿಟ್ಟಿದ್ದಕ್ಕೆ ಆಕೆಗೆ ಕಸಿವಿಸಿ ಎದುರಾಗಿದೆ ಎಂದೇ ಹೇಳ ಬಹುದು!

ಆದರೆ ಮಾಧ್ಯಮದ ಮುಂದೆ ಮಾತ್ರ ತನ್ನ ಪ್ಲೇಟ್ ಬದಲಾಯಿಸಿದ್ದಾಳೆ ಈ ಚೆಲುವೆ. ಕೆರಿಯರ್ ನಲ್ಲಿ ಇಂತಹ ಅಂಶಗಳು ಸಾಮಾನ್ಯ. ಆ ಸಿನಿಮಾಗಳಲ್ಲಿ ನಟಿಸದೆ ಇರುವುದಕ್ಕೆ ಯಾವುದೇ ರೀತಿಯಲ್ಲೂ ನೋವಿಲ್ಲ ಎನ್ನುವ ಮಾತನ್ನು ಆಕೆ ಹೇಳಿದ್ದಾಳೆ.

ಶುದ್ಧಿಯಲ್ಲಿ ಫರಾನ್ ಅಕ್ತರ್, ಬಾಂಬೆ ಸಮುರಾಯ್ ಚಿತ್ರದಲ್ಲಿ ಹೃತಿಕ್ ರೋಶನ್ ಜೊತೆ ನಟಿಸ ಬೇಕಿದೆ ಈ ಚೆಲುವೆ. ಆದರೆ ಹೃತಿಕ್ ಆರೋಗ್ಯದಲ್ಲಿ ಏರುಪೇರಾದ ಕಾರಣ ಈ ಚಿತ್ರವೂ ಸದ್ಯಕ್ಕೆ ಕೆಲಸ ಮಾಡುತ್ತಿಲ್ಲ.

PR
ಆದರೆ ಆರೋಗ್ಯ ಸರಿ ಆಗುವಷ್ಟು ಕಾಲ ಕಾಯುವ ತಾಳ್ಮೆ ಇಲ್ಲದೆ ಈಕೆ ಚಿತ್ರದಿಂದ ಹೊರ ಬಿದ್ದಿದ್ದಾಳೆ. ಅಲ್ಲದೆ ಬಾಂಬೆ ಸಮುರಾಯ್ ಚಿತ್ರವನ್ನು ನಿರ್ಮಿಸುತ್ತಿರುವ ಎಕ್ಸೆಲ್ ಸಂಸ್ಥೆಯು ಶಾರುಖ್ ಸಿನಿಮಾದ ನಿರ್ಮಾಣದತ್ತ ಮಗ್ನವಾಗಿದೆ. ಈ ಕಾರಣದಿಂದ ಆ ಚಿತ್ರದ ಮುಂದುವರಿಕೆಯು ಸಹ ಸದ್ಯಕ್ಕೆ ಇಲ್ಲ.

ಸೆಪ್ಟಂಬರ್ ನಲ್ಲಿ ಚಿತ್ರದ ಶೂಟಿಂಗ್ ಆರಂಭ ಆಗುವ ಸಾಧ್ಯತೆ ಹೆಚ್ಚಾಗಿದೆ. ಶುದ್ಧಿಯಿಂದ ಹೊರಗೆ ಬಂದ ಕಾರಣ ಅದರ ಬಗ್ಗೆ ಯಾವುದೇ ಬಗೆಯ ಮಾತು ಹೇಳಲು ತಾನು ಸಿದ್ಧ ಇಲ್ಲ. ಬಿಟ್ಟು ಬಂದಿರುವ ಪ್ರಾಜೆಕ್ಟ್ ಗಳ ಬಗ್ಗೆ ಹೆಚ್ಚು ಮಾತನಾಡಲಾರೆ ಎಂದು ಹೇಳಿದ್ದಾಳೆ ಆ ಚೆಲುವೆ. ಇವೆಲ್ಲದರ ನಡುವೆ ಆಕೆಗೆ ಸಿಂಗಂ 2 ರಲ್ಲಿ ಅವಕಾಶ ದೊರಕಿದೆ. ಇದರ ಶೂಟಿಂಗ್ ಇದೆ ತಿಂಗಳು 25ರಿಂದ ಆರಂಭ ಆಗುತ್ತದೆ.

ವೆಬ್ದುನಿಯಾವನ್ನು ಓದಿ