"ನಗ್ನ ಯೋಗಗುರು" ಬಿಗ್‌ ಬಾಸ್‌ ಮನೆಗೆ ಬಂದ.

ಸೋಮವಾರ, 31 ಮಾರ್ಚ್ 2014 (17:39 IST)
ನಗ್ನ ಯೋಗ ಗುರು ಇಂದು ಬಿಗ್‌ ಬಾಸ್‌ ಮನೆಗೆ ಬಲಗಾಲಿಟ್ಟು ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಬಿಗ್‌ ಬಾಸ್‌ ಮನೆಯಲ್ಲಿ ಇನ್ನಷ್ಟು ಕುತೂಹಲ ಕೆರಳಿದಂತಾಗಿದೆ. ವೈಲ್ಡ್‌ ಕಾರ್ಡ್ ಎಂಟ್ರಿಯ ಮೂಲಕ ಹಿಂದಿಯ ಬಿಗ್‌ ಬಾಸ್‌ 7 ನೇ ಆವೃತ್ತಿಯ ಬಿಗ್‌ ಬಾಸ್‌ ಮನೆಗೆ ನಗ್ನ ಯೋಗ ಗುರು ಆಗಮಿಸಿದ್ದಾರೆ. ಅರೆ ಯಾರು ಆ ನಗ್ನ ಯೋಗ ಗುರು ಅಂದ್ರಾ? ಅವರೇ ಆಸಿಫ್‌ ಅಜಿಮ್‌ ಕಣ್ರಿ.

ಇವರು ಬೆತ್ತಲೆಯಾಗಿ ಯೋಗ ಮಾಡುವ ಯೋಗ ಶಿಕ್ಷಕರಾಗಿದ್ದಾರೆ. ಇವರ ನಗ್ನ ಯೋಗವು ಬಿಗ್‌ ಬಾಸ್‌ ಮನೆಯಲ್ಲಿನ ಜನಗಳ ಪಾತಿವ್ರತೆಗೆ ಭಗ್ನ ತರುತ್ತದೆಯೋ.. ಅಥವ ನಗ್ನ ಯೋಗದಲ್ಲಿ ಬಿಗ್‌ ಬಾಸ್‌ ಸ್ಪರ್ಧಿಗಳು ಮಗ್ನರಾಗುತ್ತಾರೋ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ

ವೆಬ್ದುನಿಯಾವನ್ನು ಓದಿ