ನನ್ನ ಮದುವೆನಾ ಯಾರ ಜೊತೆ ಅಂತ ಕೇಳಿದ್ದಾಳೆ ಕಾಜಲ್

ಶನಿವಾರ, 1 ಮಾರ್ಚ್ 2014 (10:26 IST)
PR
ಕಾಜಲ್ ಅಗರವಾಲ್ ಬಗ್ಗೆ ದಿನಕ್ಕೊಂದು ಹೊಸ ಸುದ್ದಿ ಬರದೆ ಇದ್ದರು ಆಕೆಗೆ ಅವಕಾಶಗಳು ಇಲ್ಲ. ಆಕೆಯ ಬಗ್ಗೆ ತೆಲುಗು ಚಿತ್ರರಂಗ ಗಮನ ನೀಡಿಲ್ಲ ಎನ್ನುವ ಸಂಗತಿಯನ್ನು ಮಾಧ್ಯಮಗಳು ಬರೆಯುತ್ತಲೇ ಮತ್ತು ಹೇಳುತ್ತಲೇ ಬಂದಿವೆ. ಆದರೆ ಈಗ ಆಕೆಯ ಮದುವೆಯ ಬಗ್ಗೆ ಸುದ್ದಿಯೋ ಸುದ್ದಿ.

ಈ ಮುದ್ದಾದ ನಟಿಯ ಮದುವೆ ನಿಶ್ಚಯ ಆಗಿ ಹೋಗಿದೆ.ಸಧ್ಯದಲ್ಲೇ ಆಕೆ ಮದುವೆ ಆಗುತ್ತಿದ್ದಾಳೆ, ಮುಂಬೈನಲ್ಲಿ ನೆಲೆಸಿರುವ ಬ್ಯುಸಿನೆಸ್ ಮ್ಯಾನ್ ಜೊತೆಯಲ್ಲಿ ಆಕೆಯು ಲವಿ ಡವಿಯಲ್ಲಿ ಬ್ಯುಸಿ , ಹೀಗೆ ಅನೇಕ ಬಗೆಯ ಸುದ್ದಿಗಳು ಹರಡಿತ್ತು. ಆದರೆ ಈ ಬಗ್ಗೆ ನಟಿ ಕಾಜಲ್ ಒಪ್ಪಿಕೊಂಡಿಲ್ಲ.

PR
ನಾನು ಯಾರನ್ನು ಪ್ರೀತಿಸಿಲ್ಲ ಮತ್ತು ಮದುವೆ ನಿಶ್ಚಯ ಆಗಿಲ್ಲ. ನಾನು ಲವ್ ಮ್ಯಾರೇಜ್ ಗೆ ಪ್ರಾಮುಖ್ಯತೆ ನೀಡುತ್ತೇನೆ. ನಾನು ಖಂಡಿತಾ ಮದುವೆ ಆಗ್ತೀನಿ ಎನ್ನುವ ಮಾತನ್ನು ಹೇಳಿದ್ದಾಳೆ ಆ ಚೆಲುವೆ.

ಸದ್ಯಕ್ಕೆ ನನಗೆ ಮದುವೆ ಆಗುವ ಬಗ್ಗೆ ಆಸಕ್ತಿ ಇಲ್ಲ,ಆಸಕ್ತಿ ಬಂದಾಗ ನಿಮಗೆ ತಪ್ಪದೆ ಹೇಳುತ್ತೇನೆ ಎಂದು ರಪ್ಪಂತ ಮುಖಕ್ಕೆ ಹೊಡೆದಂತೆ ಹೇಳಿದ್ದಾಳೆ ಆಕೆ.

ವೆಬ್ದುನಿಯಾವನ್ನು ಓದಿ