ನೋಡ ಬನ್ನಿ ನೋಡ ಬನ್ನಿ ಸೋಹಾ ಬಿಕನಿಯ .. ಸುಂದರಿಯ ಮೈಯಾ

ಸೋಮವಾರ, 31 ಮಾರ್ಚ್ 2014 (18:55 IST)
ಬೆಂಗಾಲಿ ಹುಲಿ ಪಟೌಡಿ ಸಾಹ್ ಅವರ ರಾಜಕುಮಾರಿ ಸೋಹಾ ಅಲಿ ಕಾನ್ ಆರಕ್ಕೂ ಮೂರಕ್ಕೂಏರದ ನಟಿ. ಅಮ್ಮನ ರೂಪ ಪಡೆದು ಬಂದಿದ್ದರೂ ಪ್ರತಿಭೆಗಿಂತಾ ಸೋಹಾ ಹೆಚ್ಚು ಗೊತ್ತಾಗಿದ್ದು ಆಕೆಯ ಗೇಂ ಗಳಿಂದ. ಅದರಲ್ಲು ಪ್ರೀತಿಯಾಟದಲ್ಲಿ ಸದಾ ಬ್ಯುಸಿಯಾಗಿರುವ ಸೋಹಾ ಅನ್ನೋ ಸುಂದರಿ ಆ ಮೂಲಕ ಸದಾ ಬಾಲಿವುಡ್ ಮಂದಿಯ ಕಣ್ಣಿಗೆ ತಂಪಾಗಿ , ಬಾಯಿಗೆ ಹಿತವಾಗುತ್ತಾ ಬದುಕಿದ್ದಾಳೆ. ಅಂದಂಗೆ ಆಕೆ ಬಗ್ಗೆ ಈಗ ಹೇಳುವ ಸಂಗತಿ ಏನಂದರೆ ಸೋಹಾಇಷ್ಟು ದಿನಗಳ ಕಾಲ ಚೂಡಿದಾರ, ಜೀನ್ಸ್ನ್ ಬಟ್ಟೆ ಗಳಿಂದ ಮೈ ಮುಚ್ಚಿ ಸಿನಿಮಾಗಳಲ್ಲಿ ನಟಿಸುತ್ತಿದ್ದಳು. ಆದರೆ ಈಗ ಆಕೆ ಆ ಇಮೇಜಿನಿಂದ ಹೊರ ಬರಲು ಸಿದ್ಧವಾಗಿದ್ದಾಳೆ. ಆಕೆಯ ಹೊಸ ಚಿತ್ರ ಮಿಸ್ಟರ್ ಜೊ ಬಿ ಕರ್ವಾಲೊ ದಲ್ಲಿ ಸೋಹಾ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.

ಹಾಗೆ ನೋಡಿದರೆ ಆಕೆ ಆ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ನಟಿಸುತ್ತಿದ್ದಾಳೆ. ಅದಕ್ಕೂ ಬಿಕನಿಗೂ ಏನು ಸಂಬಂಧ ಅಂತ ನೀವು ಬೆಚ್ಚಿ ಬೀಳುವ ಅಗತ್ಯ ಇಲ್ಲ. ಏಕೆಂದರೆ ಸೋಹ ವಿವಿಧ ರೂಪಗಳ ಮೂಲಕ ಜನರ ಮುಂದೆ ಬರುತ್ತಿದ್ದಾಳೆ .ಒಂದರ್ಥದಲ್ಲಿ ಕ್ಯಾಬರೆ ಡ್ಯಾನ್ಸರ್ ಅವತಾರದಲ್ಲಿ! ಭೋಲಾ ರಾಮ್ ಮಾಳವಿಯಾ ಮತ್ತು ಶೀತಲ್ ಮಾಳವಿಯ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಮೀರ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಜಾವೆದ್ ಜಾಫ್ರಿ ಮತ್ತು ಅರ್ಶದ್ ವಾರ್ಸಿ ಸಹ ನಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ