ಯಾವುದೆ ಕೋನದಲ್ಲಿ ನೋಡಿದರು ಸುಂದರವಾಗಿ ಕಾಣುತ್ತಾರೆ ಕೆಲವರು. ಅಂತಹವರ ಪ್ರಮಾಣ ತುಂಬಾ ಕಡಿಮೆ ಈ ಸೃಷ್ಟಿಯಲ್ಲಿ .ಹಾಲಿವುಡ್ ಪ್ರಸಿದ್ಧ ಪಾಪ್ ಹಾಡು ಗಾರ್ತಿ ಬ್ರಿಟ್ನಿ ಸ್ಪಿಯರ್ ಈ ಲಿಸ್ಟ್ಗೆ ಸೇರ್ಪಡೆ ಆಗುತ್ತಾರೆ. ಅವರನ್ನು ಎತ್ತ ಕಡೆಯಿಂದ ನೋಡಿದರೂ, ಎಲ್ಲೆಲ್ಲೂ ಸುಂದರ ಅತಿ ಸುಂದರಿ!ಪ್ರಸ್ತುತ ಬ್ರಿಟ್ನಿ ಹೊಸ ಆಲ್ಬಂ ತಯಾರು ಮಾಡುತ್ತಿದ್ದಾರೆ. ಅವರ ಈ ಆಲ್ಬಂನ ಕೆಲವು ಸನ್ನಿವೇಶಗಳಲ್ಲಿ ನಟಿಸಲು ತನ್ನಂತೆ ಇರುವ ಹೆಣ್ಣುಮಗಳನ್ನು ಹುಡುಕುತ್ತಿದ್ದಾರೆ. ವಿಷಾದ ಅಂದರೆ ಆಕೆಗೆ ಅಂತಹ ನಕಲಿ ಬ್ರಿಟ್ನಿ ದೊರಕಲೇ ಇಲ್ಲ. ಇದರಿಂದ ಬೇಸತ್ತ ಬ್ರಿಟ್ನಿ ಕಡೆಗೆ ತನ್ನ ಅಂಗಾಂಗದ ವಿನ್ಯಾಸ ರೂಪರೇಷೆ ಎಲ್ಲವನ್ನು ಬಿಚ್ಚಿಟ್ಟರಂತೆ ಮೀಡಿಯಗಳ ಮುಂದೆ .
ಹಾಗಾದರೂ ತನಗೆ ಬೇಕಾದ ಹುಡುಗಿ ಸಿಗ ಬಹುದು ಎಂದು ದೂರದ ಆಸೆ ಆಕೆಗೆ. ನಾಲ್ಕು ಅಡಿ ಎತ್ತರ, ಶರೀರದ ಅಳತೆ 32-27-35, ಡ್ರಸ್ ಸೈಜ್ 4, ಶೂ ಸೈಜ್ 7 ಇದ್ದರೆ ಸಾಕು ನಕಲಿ ಬ್ರಿಟ್ನಿ ಆಗ ಬಹುದು.ಈ ವಿಷಯ ಗೊತ್ತಾದ ತಕ್ಷಣ ಆ ಅಳತೆಯ ಹೆಣ್ಣು ಮಕ್ಕಳು ಬ್ರಿಟ್ನಿ ಆಫೀಸ್ ಎದುರು ಕ್ಯೂ. ಅಂತಹ ಚಾನ್ಸ್ ಯಾರಿಗೆ ಸಿಗುತ್ತದೆಯೋ ಅವರಿಗೆ ಆಗುವಷ್ಟು ಖುಷಿಯನ್ನು ವರ್ಣಿಸಲು ಅಸಾಧ್ಯ. ಅದೇ ರೀತಿ ಆಕೆಯ ಸೈಜು, ಹೈಟು ಗೊತ್ತಾಗಿ ಆಕೆಯ ಅಭಿಮಾನಿಗಳಿಗೂ ತುಂಬಾ ಖುಷಿ ಆಗಿದೆ.