ಕಥೆಯ ಹೂರಣ ಇರುವುದೇ ಎಪ್ಪತ್ತರ ದಶಕದ ಕಥೆಯ ಸುತ್ತ. ಈ ಚಿತ್ರದಲ್ಲಿ ಪ್ರಿಯಾಂಕ ಚೋಪ್ರ ಕ್ಯಾಬರೆ ನರ್ತಕಿ ಆಗಿದ್ದಾರೆ. ಗುಂಡೇ ಅತ್ಯಂತ ಆಸಕ್ತಿ ಉಂಟು ಮಾಡುವುದು ಹಳೆಯ ಕಥೆಯ ಅಥವಾ ಎಪ್ಪತ್ತರ ದಶಕದ ಕಥಾಹಂದರ ಹೊಂದಿರುವುದರಿಂದ ಎನ್ನ ಬಹುದಾಗಿದೆ.
ಈ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್ ಬಾಂಗ್ಲಾ ದೇಶದ ನಿರಾಶ್ರಿತರು. ಅವರು ಕ್ಯಾಂಪ್ ನಲ್ಲಿ ಒಂದಾಗುತ್ತಾರೆ. ಗೆಳೆಯರಾಗುತ್ತಾರೆ, ಒಟ್ಟಿಗೆ ಕಳ್ಳತನ ಮಾಡುತ್ತಾ ಮಾಫಿಯಾ ಲೋಕಕ್ಕೂ ಎಂಟ್ರಿ ಆಗುತ್ತಾರೆ. ಆಗ ಅವರ ಬದುಕಲ್ಲಿ ಕ್ಯಾಬರೆ ನರ್ತಕಿಯ ಪ್ರವೇಶ ಆಗುತ್ತದೆ.
ಇಬ್ಬರಿಗೂ ಅವಳ ಬಗ್ಗೆ ಪ್ರೀತಿ ಉಂಟಾಗುತ್ತದೆ. ಆಗ ಇಬ್ಬರು ಆಕೆಯನ್ನು ಪಡೆಯುವ ಹಂಬಲ ಹೊಂದುತ್ತಾರೆ. ಅಂತಿಮವಾಗಿ ಏನಾಗುತ್ತದೆ ಎನ್ನುವುದೇ ಕಥೆಯ ಕ್ಲೈಮ್ಯಾಕ್ಸ್ .
PR
ಚಿತ್ರವನ್ನು ಅಬ್ಬಾಸ್ ಆಲಿ ನಿರ್ದೇಶನ ಮಾಡಿದ್ದಾರೆ. ರಾಜೇಶ್ ಖನ್ನ, ದೇವಾನಂದ್ ರ ನಟನೆಯ ಕಥೆಯನ್ನು ಚಿತ್ರ ನೋಡಲು ಬಯಸುವವರಿಗೆ ಈ ಚಿತ್ರ ಇಷ್ಟ ಆಗುತ್ತದೆ. ಪ್ರಿಯಾಂಕ ಚೋಪ್ರ, ರಣವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್ ಅತ್ಯದ್ಭುತವಾಗಿ ನಟಿಸಿದ್ದಾರೆ. ಯಶ್ ರಾಜ್ ಫಿಲಿಮ್ಸ್ ನಿಂದ ತಯಾರಾಗಿರುವ ಗುಂಡೇ ಖುಷಿ ನೀಡುವ ಚಿತ್ರ ಎಂದು ನಿಶ್ಚಿತವಾಗಿ ಹೇಳ ಬಹುದಾಗಿದೆ.