ಮೆಗಾಸ್ಟಾರ್ ಚಿರಂಜೀವಿ ಮೇಲೆ ಅವರ ಅಭಿಮಾನಿಗಳಿಗೆ ಸಿಟ್ಟು ?

ಶನಿವಾರ, 15 ಮಾರ್ಚ್ 2014 (10:07 IST)
PR
ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮೀಡಿಯ ಸಮ್ಮೇಳನಕ್ಕೆ ಹೋಗ ಬೇಡಿ ಎಂದು ಮೆಗಾ ಸ್ಟಾರ್ ಚಿರಂಜೀವಿ ತಮ್ಮ ಅಭಿಮಾನಿ ಸಂಘಗಳಿಗೆ ತಾಕೀತು ಮಾಡಿದ್ದಾರೆ ಎನ್ನುವುದು ಪ್ರಸ್ತುತ ಟಾಲಿವುಡ್ ನಲ್ಲಿ ಕೇಳಿ ಬರುತ್ತಿರುವ ಸದ್ದು. ಆದರೆ ಅಪಾರ ಸಂಖ್ಯೆಯ ಮೆಗಾ ಅಭಿಮಾನಿಗಳು ಮಾತ್ರ ತಾವು ತಪ್ಪದೆ ಈ ಸಮಾವೇಶಕ್ಕೆ ಹೋಗುವುದಾಗಿ ಹೇಳಿದ್ದಾರಂತೆ.

ಅಷ್ಟೇ ಅಲ್ಲದೆ ಮೆಗಾ ಕುಟುಂಬದ ಅಭಿಮಾನಿಗಳು ಪವನ್ ಅವರನ್ನು ಒಂಟಿ ಮಾಡುವುದು ಎಳ್ಳಷ್ಟು ಸರಿಯಲ್ಲ ಎಂದು ನಿರ್ಧರಿಸಿ ಚಿರು ಮೇಲೆ ಸಿಟ್ಟಾಗಿದ್ದಾರೆ ಎನ್ನುವುದು ಸದ್ಯದ ಮಾತು. ಅಲ್ಲದೆ ಪವನ್ ಹೊಸ ಪಕ್ಷದ ಆರಂಭ ಮಾಡುತ್ತಾರೆ ಎನ್ನುವ ಸುದ್ದಿ ತಿಳಿದ ತಕ್ಷಣ ಯಾರು ಬೆಂಬಲಿಸ ಬೇಡಿ ಎಂದು ಚಿರು ತನ್ನ ಅಭಿಮಾನಿ ಸಂಘಗಳಿಗೆ ಫೋನ್ ಮುಖಾಂತರ ಹೇಳಿದ್ದರು ಎನ್ನುವ ಸುದ್ದಿಯು ಸಹ ಈಗ ಸಿಕ್ಕಾಪಟ್ಟೆ ಜೋರಾಗಿ ಹರಡಿದೆ.

ವೆಬ್ದುನಿಯಾವನ್ನು ಓದಿ