ರಿಯಲ್ ದಬಾಂಗ್ ಹೀರೋ ಸಲ್ಮಾನ್ ಖಾನ್ !

ಗುರುವಾರ, 6 ಫೆಬ್ರವರಿ 2014 (10:07 IST)
PR
ಸಲ್ಮಾನ್ ಖಾನ್ ನಿಜವಾದ ದಬಾಂಗ್ ಹೀರೋ ಆಗಿ ಮೆರೆದಿದ್ದಾರೆ. ಸಾಮಾನ್ಯವಾಗಿ ಚಿತ್ರಗಳಲ್ಲಿ ಮಾತ್ರ ಹೀರೋ ಆಗುವ ನಟರು ತಮ್ಮ ನಿಜ ಬದುಕಲ್ಲಿ ಅಂತಹ ಯಾವುದೇ ಬಗೆಯ ಒಳ್ಳೆಯ ಕೆಲಸಗಳನ್ನು ಮಾಡುವುದು ಕಡಿಮೆ ಅಣ್ಣ ಬಹುದು. ಆದರೆ ಬೆರಳೆಣಿಕೆಯಷ್ಟು ಮಂದಿ ಇಂತಹ ಕೆಲಸಗಳಲ್ಲಿ ಮುಂದೆ ಇದ್ದಾರೆ. ಅವರಲ್ಲಿ ಸಲ್ಮಾನ್ ಸಹ ಒಬ್ಬರು ಎನ್ನುವುದನ್ನು ಬಿಡಿಸಿ ಹೇಳ ಬೇಕಿಲ್ಲ. ಯಾಕೆ ಎಂದರೆ ಅಂತಹ ಉತ್ತಮ ಕೆಲಸ ಇತ್ತೀಚೆಗೆ ಮಾಡಿದ್ದಾರೆ ಸಲ್ಲು ಮಿಯಾ ! ಇವರು ಗಳಿಕೆ ಮಾಡಿದ ಹಣವನ್ನು ದಾನ ಮಾಡುವ ಒಳ್ಳೆಯತನ ಹೊಂದಿದ್ದಾರೆ ಸಲ್ಮಾನ್. ನಲವತ್ತೆಂಟರ ಹರೆಯದ ಈ ಯುವಕ ತನ್ನ ಹೊಸ ಚಿತ್ರ ಜೈ ಹೊ ಹೇಳಿಕೊಳ್ಳುವಂತಹ ಯಶ ಸಾಧಿಸದೆ ಇದ್ದರು ಸಹ ಅದರಲ್ಲಿ ಕೆಲಸ ಮಾಡಿದ ಪಾತ್ರವರ್ಗ ಮತ್ತು ತಂತ್ರಜ್ಞರ ಬಗ್ಗೆ ಅಸಹನೆ ತೋರಿಲ್ಲ.

ತನ್ನ ಸೋಲಿಗೆ ತಾನೇ ಕಾರಣ ಎನ್ನುವ ಸಂಗತಿಗೆ ಬದ್ದರಾಗಿದ್ದಾರೆ. ಅಷ್ಟೇ ಅಲ್ಲದೆ ತನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಒಂದು ಲಕ್ಷ ರೂ ನೀಡಿ ಗೌರವಿಸಿ ಮಾನವತೆ ಮೆರೆದಿದ್ದಾರೆ ಸಲ್ಲು.
ಇದರ ಬಗ್ಗೆ ಅವರ ತಂದೆ ಸಲೀಮ್ ಖಾನ್ ಸ್ಪಷ್ಟ ಪಡಿಸಿದ್ದಾರೆ. ಇದನ್ನು ಯಾವುದೇ ಪಬ್ಲಿಸಿಟಿಗಾಗಿ ತಮ್ಮ ಮಕ್ಕಳು ಮಾಡಿಲ್ಲ ಎಂದಿದ್ದಾರೆ ಸಲೀಮ್ ಖಾನ್.

ಜೈ ಹೊ ಚಿತ್ರವು ನಿರೀಕ್ಷಿಸಿದಂತಹ ಯಶಸ್ಸು ಗಳಿಸದೆ ಇದ್ದರು ಸಹ ಅದರಲ್ಲ್ಲಿ ಕೆಲಸ ಮಾಡಿದವರ ಬಗ್ಗೆ ಸಲ್ಮಾನ್ ಖಾನ್ ಮತ್ತು ಸೊಹೈಲ್ ಖಾನ್ ಅವರಿಗೆ ಹೆಚ್ಚು ಗೌರವ ಉಂಟಾಗಿದೆಯಂತೆ. ಅವರ ಕೆಲಸದ ಬಗ್ಗೆ ಈ ಸಹೋದರರು ತೃಪ್ತಿ ಹೊಂದಿದ್ದಾರೆ ಎನ್ನುವ ಸಂಗತಿಯನ್ನು ಆಪ್ತ ಮೂಲಗಳು ತಿಳಿಸಿವೆ. ಆದ್ದರಿಂದ ಅವರ ಈ ಕರ್ತವ್ಯ ನಿಷ್ಠೆಗೆ ಉತ್ತಮ ಕಾಣಿಕೆ ನೀಡುವ ಸಲುವಾಗಿ ಅವರು ಒಂದೊಂದು ಲಕ್ಷ ನೀಡಿ ಗೌರವಿಸಿದರಂತೆ. ರೀಲ್ ಮಾತ್ರವಲ್ಲ ರಿಯಲ್ ನಲ್ಲೂ ಹೀರೋ ಆದರು ಸಲ್ಮಾನ್ !

ವೆಬ್ದುನಿಯಾವನ್ನು ಓದಿ