ರಿಯಾಗೆ ಸೋನಾಕ್ಷಿ ಧ್ವನಿ

ಶುಕ್ರವಾರ, 28 ಫೆಬ್ರವರಿ 2014 (09:59 IST)
PR
ಕಾರ್ಟೂನ್ ಸಿನಿಮಾಗಳಿಗೆ ಧ್ವನಿ ನೀಡಲು ಅನೇಕ ಸೂಪರ್ ಡೂಪರ್ ಹಿಟ್ ಆದ ನಟ ಮತ್ತು ನಟಿಯರು ಸಿದ್ಧ ಆಗಿದ್ದಾರೆ.ನಟಿ ಸೋನಾಕ್ಷಿ ಸಿನ್ಹ ಇಮ್ರಾನ್ ಖಾನ್ ಈ ಲಿಸ್ಟ್ ಗೆ ಸೇರ್ಪಡೆ ಆಗಿದ್ದಾರೆ.

2011ರಲ್ಲಿ ಯಶಸ್ವಿ ಆದ ಅನಿಮೇಶನ್ ಚಿತ್ರ ರಿಯಾ ಸಿಕ್ಕಾಪಟ್ಟೆ ಯಶಸ್ಸು ಗಳಿಸಿತ್ತು. ಈಗ ರಿಯಾ 2 ಚಿತ್ರವೂ ಡಬ್ಬಿಂಗ್ ಕಾರ್ಯಕ್ಕೆ ಸಿದ್ಧ ಆಗಿದೆ. ಇದಕ್ಕೆ ತಮ್ಮ ಧ್ವನಿಯನ್ನು ನೀಡಲು ಸಿದ್ಧ ಆಗಿದ್ದಾರೆ ಸ್ಟಾರ್ ನಟ ನಟಿಯರು. ಸಿನಿಮಾದಲ್ಲ್ಲಿ ಇರುವ ಜ್ಯುಯಲ್ , ಬ್ಲೂ ಅನ್ನುವ ಪಾತ್ರಗಳಿಗೆ ಧ್ವನಿ ನೀಡಲು ಸೋನಾಕ್ಷಿ ಮತ್ತು ಇಮ್ರಾನ್ ಸಿದ್ಧ ಆಗಿದ್ದಾರೆ.

PR
ಇದರ ಬಗ್ಗೆ ಮಾತನಾಡುತ್ತಾ ಸೋನಾಕ್ಷಿ ತನಗೆ ಮೊದಲಿನಿಂದಲೂ ಅನಿಮೇಶನ್ ಚಿತ್ರಗಳೆಂದರೆ ಸಿಕ್ಕಾಪಟ್ಟೆ ಇಷ್ಟ ಎನ್ನುವುದನ್ನು ಮಾಧ್ಯಮದ ಮುಂದೆ ಇಟ್ಟರು.

ತನ್ನ ಬಳಿ ರಿಯಾ ಅನಿಮೇಶನ್ ಗೆ ಧ್ವನಿ ನೀಡಲು ಕೇಳಿದಾಗ ಹಿಂದೂ ಮುಂದೂ ನೋಡದೆ ಸಮ್ಮತಿಸಿದೆ ಎನ್ನುವ ಮಾತನ್ನು ಹೇಳಿದರು. ಈ ಅವಕಾಶ ಸಿಕ್ಕೊಡನೆ ಆಕೆಗೆ ಉದ್ವೇಗ ತಡೆಯಲಾಗಲಿಲ್ಲವಂತೆ ಹೀಗೆಂದು ತಮ್ಮ ಭಾವನೆಗಳನ್ನು ತಿಳಿಸಿದ್ದಾರೆ. ಇದು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಪ್ರಿಲ್ 11ರಂದು.

ವೆಬ್ದುನಿಯಾವನ್ನು ಓದಿ