ಸಾಕಾಯ್ತು ಈ ಶೂಟಿಂಗ್ ಅಂತ ಅನುಷ್ಕ ಯಾರ ಬಳಿ ಗೊಣಗಿದ್ದು ಗೊತ್ತೇ?

ಗುರುವಾರ, 13 ಮಾರ್ಚ್ 2014 (09:37 IST)
PR
ಟಾಲಿವುಡ್ ನಲ್ಲಿ ತಯಾರಾಗುತ್ತಿರುವ ಬಹು ನಿರೀಕ್ಷಿತ ಚಿತ್ರ ಬಾಹುಬಲಿ. ಇದರ ಮುಖ್ಯ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ಇವರು ಈ ಪ್ರಾಜೆಕ್ಟ್ ನಲ್ಲಿ ತಪಸ್ಸಿನಂತೆ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.ಸಿನಿಮಾಗೆಂದು ಹೀರೋ ಪ್ರಭಾಸ್, ರಾಣ ಹಾಗೂ ಹೀರೋಯಿನ್ ಅನುಷ್ಕ ಸಹಿತ ಕತ್ತಿ, ಕುದುರೆ ಸವಾರಿಯಂತಹ ವಿದ್ಯೆಗಳನ್ನು ಕಲಿತು ನಟಿಸುತ್ತಿದ್ದಾರೆ.

ಆದ್ರೆ ಇಂತಹ ಸನ್ನಿವೇಶಗಳು ಶೂಟ್ ಆಗುವ ಮುನ್ನ ನಿರ್ದೇಶಕ ರಾಜ ಮೌಳಿ ಒಮ್ಮೆ ರಿಹರ್ಸಲ್ ಮಾಡಿಸುತ್ತಾರಂತೆ. ಅದರಲ್ಲೂ ಪ್ರಭಾಸ್ ಅವರ ನಟನೆ ತೃಪ್ತಿ ಆಗದೆ ಇದ್ದಾರೆ ಅವರು ಹೆಚ್ಚು ಬಾರಿ ಅದನ್ನು ಪ್ರಭಾಸ್ ಅವರ ಕೈಲಿ ಮಾಡಿಸುತ್ತಿದ್ದಾರಂತೆ. ಆ ಮುಖಾಂತರ ಅವರನ್ನು ಪರ್ಫೆಕ್ಟ್ ಮಾಡುವ ಪ್ರಯತ್ನದಲ್ಲಿ ಇದ್ದಾರೆ ನಿರ್ದೇಶಕ ರಾಜ ಮೌಳಿ .

ವೆಬ್ದುನಿಯಾವನ್ನು ಓದಿ