ಸಿನಿಮಾ ಅಂದ್ರೆ ಮಾದಕ ಪಾನೀಯದಂತೆ, ಮತ್ತಿನಂತೆ . ಅದರ ಮಾಯಾ ಜಾಲದಿಂದ ಬಿಟ್ಟು ಹೋಗಲು ಸಾಧ್ಯವೇ ಇಲ್ಲ. ಅದರಂತಹ ಒಂದು ರಂಗವೇ ಇಲ್ಲ ಒಮ್ಮೆ ಎಂಟ್ರಿ ಆದರೆ ಮತ್ತೆ ಬಿಡುವ ಬಗ್ಗೆ ಯೋಚನೆ ಬರಲ್ಲ ಅಂತ ಹೇಳಿರೋದು ಬೇರೆ ಯಾರು ಅಲ್ಲ ಹಿಂದಿ ಚಿತ್ರ ರಂಗದ ಗ್ಲಾಮಿ ನಟಿಯರಲ್ಲಿ ಒಬ್ಬರಾದ ದಿಯಾ ಮಿರ್ಜಾ.
ಈಗ ಅವರು ಬಾಬಿ ಜಾಸೂಸ್ ಅನ್ನುವ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.ದಕ್ಷಿಣ ಭಾರತದ ಅದರಲ್ಲೂ ಹೈದರಾಬಾದ್ ಚೆಲುವೆ ದಿಯಾ ಹೇಳೋದಿಷ್ಟೇ ಸಾಮಾನ್ಯವಾಗಿ ಮಹಿಳಾ ಆಧಾರಿತ ಚಿತ್ರಗಳು ಹೆಚ್ಚು ಹಾಸ್ಯ ಪ್ರಧಾನವಾಗಿ ಇರಲ್ಲ, ಆದರೆ ಬಾಬಿ ಜಾಸೂಸ್ ಚಿತ್ರದಲ್ಲಿ ಭರಪೂರ ಹಾಸ್ಯ ಇದೆ ಅಂತಾರೆ ದಿಯಾ.
PR
ಸಾಮಾನ್ಯವಾಗಿ ಡಿಟೆಕ್ಟೀವ್ ಪಾತ್ರದಲ್ಲಿ ಪುರುಷರೇ ನಟಿಸುವುದು. ಆದರೆ ನಮ್ಮ ಚಿತ್ರದಲ್ಲಿ ವಿದ್ಯಾ ಬಾಲನ್ ಅವರು ಈ ಪಾತ್ರ ಮಾಡುತ್ತಿದ್ದಾರೆ. ಚಿತ್ರದಲ್ಲಿ ಗಡ್ಡ, ಕಿರು ಕೂದಲು ಹೀಗೆ ಭಿನ್ನ ವೇಷದಲ್ಲಿ ವಿದ್ಯಾ ಬಾಲನ್ ನಟಿಸುತ್ತಿದ್ದಾರೆ. ಅವರ ಫೋಟೋಗಳು ಬಿಡುಗಡೆ ಆಗಿದ್ದು ಹೆಚ್ಚು ಜನರನ್ನು ಸೆಳೆಯುತ್ತಿದೆ ಎಂದು ಹೇಳಿದ್ದಾರೆ ದಿಯಾ
ಇದು ಪುರುಷ ಮಹಿಳೆ ಅನ್ನದೆ ಎಲ್ಲರನ್ನು ಆಕರ್ಷಿಸುವ ಸಿನಿಮಾ. ಇದರ ಬಗ್ಗೆ ಹೇಳುವುದಾದರೆ ಕುಟುಂಬ ಸದಸ್ಯರು ಒಟ್ಟಾಗಿ ನೋಡುವ ಚಿತ್ರ ಇದಾಗಿದೆ. ಸಮರ ಶೇಖ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.