ಸಿಲಿಕಾನ್ ಸಿಟಿಯಲ್ಲಿ ಹೃತಿಕ್ ಮ್ಯಾಜಿಕ್: ಕಾಲೇಜು ಹುಡ್ಗೀರ ಜತೆ ಸಖತ್ ಸ್ಟೆಪ್ಸ್
ಸೋಮವಾರ, 31 ಮಾರ್ಚ್ 2014 (16:51 IST)
ಬೆಂಗಳೂರು: ಬಾಲಿವುಡ್ ಚಲನಚಿತ್ರ ಕೃಷ್ -3 ಸಾಕಷ್ಟು ಸುದ್ದಿ ಮಾಡಿದೆ. ಹೃತಿಕ್ ರೋಷನ್ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಹೃತಿಕ್ ಈ ಚಿತ್ರಕ್ಕಾಗಿ ಅನೇಕ ನಗರಗಳಲ್ಲಿ ಪ್ರಚಾರ ಮಾಡ್ತಿದ್ದಾರೆ. ಅದರ ಸಲುವಾಗಿ ಅವರು ಬೆಂಗಳೂರಿಗೂ ಎಂಟ್ರಿ ಕೊಟ್ಟಿದ್ದಾರೆ. ಹೃತಿಕ್ ಬೆಂಗಳೂರಿನಲ್ಲಿ ಎಂಟ್ರಿ ಕೊಟ್ಟಿದ್ದು ದಯಾನಂದ್ ಸಾಗರ್ ಎಂಜಿನಿಯರಿಂಗ್ ಕಾಲೇಜು. ಸಾವಿರಾರು ವಿದ್ಯಾರ್ಥಿಗಳು ಹೃತಿಕ್ನನ್ನು ನೋಡಲು ಮುಗಿಬಿದ್ದರು. ದಯಾನಂದ್ ಸಾಗರದ ಹುಡುಗಿಯರಂತೂ ಹೃತಿಕ್ರನ್ನು ನೋಡುವ ಆತುರದಲ್ಲಿ ನೂಕುನುಗ್ಗಲಿಗೆ ಸಿಕ್ಕಿದರು.
ನಾಲ್ವರು ಹುಡುಗಿಯರಿಗೆ ಸ್ಟೇಜ್ನಲ್ಲಿ ಹೃತಿಕ್ನನ್ನು ತಬ್ಬಿಕೊಳ್ಳಲು ಅವಕಾಶ ಸಿಕ್ಕಿತು. ಒಬ್ಬ ಹುಡುಗಿಯನ್ನು ಹೃತಿಕ್ ಎತ್ತಿಕೊಂಡು ಸುತ್ತಿದನು.. ಆ ಹುಡುಗಿಗೆ ಬಹುಶಃ ತಲೆತಿರುಗಿತೆಂದು ಕಾಣುತ್ತದೆ. ಸುತ್ತಿಸಿ ನಿಲ್ಲಿಸಿದ ಕೂಡಲೇ ಕೆಳಕ್ಕೆ ಕುಳಿತಳು. ಹೃತಿಕ್ ಹುಡುಗಿಯರ ಜತೆ ಮಸ್ತಾಗಿ ಕುಣಿದರು. ಹುಡುಗಿಯರ ಜತೆ ರಘುಪತಿ ರಾಘವ ರಾಜಾರಾಂ ಹಾಡಿಗೆ ಸ್ಟೆಪ್ ಹಾಕಿದರು. ಹೃತಿಕ್ ನೋಡಲು ಹುಡುಗಿಯರು ನೂಗುನುಗ್ಗಲು ನೆರೆದಿತ್ತು. ಸಾಕಷ್ಟು ಫ್ಯಾನ್ಸ್ಗೆ ಹೃತಿಕ್ ಆಟೋಗ್ರಾಫ್ ಕೊಟ್ಟರು. ಜತೆಗೆ ಫೋಸ್ ಕೂಡ ಕೊಟ್ಟರು.