ಹನ್ಸಿಕಾ ಮೋಟ್ವಾನಿ ವಿವಾದಗಳು- ಯಶಸ್ಸುಗಳ ಜೊತೆಗೆ ತನ್ನದೇ ಆದ ವಿಭಿನ್ನ ಜೀವನ ಶೈಲಿಯಿನ್ದಲು ಎಲ್ಲರ ಗಮನ ಸೆಳೆದಿದ್ದಾಳೆ. ಸಾಮಾನ್ಯವಾಗಿ ಚಿತ್ರಗಳಲ್ಲಿ, ಅದರಲ್ಲಿ ಇರುವ ಕಥೆಗಳಂತೆ ಅನೇಕ ಕಲಾವಿದರು ಹೃದಯ ವಿಶಾಲ ಇರುವಂತೆ ನಟಿಸಿರುತ್ತಾರೆ, ಆದರೆ ವೈಯುಕ್ತಿಕ ಬದುಕಲ್ಲಿ ಹೇಳಿಕೊಳ್ಳುವ ಕೆಲಸ ಮಾಡಿರುವುದಿಲ್ಲ.
PR
ಆದರೆ ಹನ್ಸಿಕಾ ಹಾಗಲ್ಲ ಎನ್ನುವುದನ್ನು ಆಕೆ ಅನೇಕ ಅನಾಥ ಮಕ್ಕಳನ್ನು ಸಾಕುವುದರ ಮುಖಾಂತರ ಪ್ರೂವ್ ಮಾಡಿದ್ದಾಳೆ. ಅಷ್ಟೇ ಅಲ್ಲದೆ ತನ್ನ ವಿರಾಮದ ವೇಳೆಯಲ್ಲಿ ಆಕೆ ಆ ಮಕ್ಕಳ ಜೊತೆ ಕಾಲ ಕಲಿಯಲು ಇಷ್ಟ ಪಡ್ತಾಳೆ. ಈಗ ಬಂದಿರುವ ಸುದ್ದಿ ಏನೆಂದರೆ ಅಂತಹ ಮಕ್ಕಳಿಗಾಗಿ ಆಕೆ ಒಂದು ಅನಾಥಾಶ್ರಮ ಕಟ್ಟುತ್ತಿದ್ದಾಳಂತೆ .
ತಮಿಳಿನ ಈ ಸ್ಟಾರ್ ನಟಿ ಈಗಾಗಲೇ ಇಪ್ಪತ್ತೈದು ಮಕ್ಕಳನ್ನು ದತ್ತು ತೆಗೆದು ಕೊಂಡು ಸಾಕುತ್ತಿದ್ದಾಳೆ. ಈಗ ಮತ್ತೊಂದು ಹೆಜ್ಜೆ ಮುಂದಿತ್ತು ಅನಾಥಾಶ್ರಮ ನಿರ್ಮಿಸುವ ಯೋಜನೆ ಹೊಂದಿದ್ದಾಳೆ ಆಕೆ.
PR
ಈಗ ನಟಿಸಲು ಹೊರಟಿರುವ ಎರಡು ಚಿತ್ರಗಳ ಸಂಭಾವನೆಯಿಂದ ಈ ಕೆಲಸ ಪೂರ್ಣ ಮಾಡುವ ಸುದ್ದಿ ಎಲ್ಲೆಡೆ. ಒಟ್ಟಾರೆ ಹನ್ಸಿಕ ಭಿನ್ನ ರೀತಿಯಲ್ಲಿ ತನ್ನ ಸಮಾಜಮುಖಿ ವ್ಯಕ್ತಿತ್ವದಿಂದ ಎಲ್ಲರಿಗು ಮಾದರಿ ಆಗಿದ್ದಾಳೆ.