ಹನ್ಸಿಕಾ ಬದಲಾಗಿ ರಕುಲ್

ಬುಧವಾರ, 12 ಫೆಬ್ರವರಿ 2014 (09:53 IST)
PR
ಟಾಲಿವುಡ್ ಮತ್ತು ಬಾಲಿವುಡ್ ಜೊತೆಗೆ ಕಾಲಿವುಡ್ ಎಲ್ಲದರಲ್ಲೂ ತನ್ನ ಪ್ರತಿಭೆ ತೋರಿ ಗೆದ್ದಿರುವ ಗ್ಲಾಮಿ ನಟಿ ಹನ್ಸಿಕಾ ಮೋಟ್ವಾನಿ ಅತ್ಯಂತ ಬ್ಯುಸಿ ಇರುವ ನಟಿ. ಈಕೆ ಅದೆಷ್ಟರ ಮಟ್ಟಿಗೆ ಕೆಲಸಗಳಿಂದ ಬ್ಯುಸಿ ಅಂದ್ರೆ ಮುಂದಿನ ಬಹು ನಿರೀಕ್ಷಿತ ಚಿತ್ರ ಮಂಚು ಮನೋಜ್ ನಲ್ಲಿ ನಟಿಸಲು ಅವಕಾಶ ಮಾಡಿಕೊಡುತ್ತಿಲ್ಲ ಸಮಯ. ಆಕೆಯ ಬ್ಯುಸಿ ಶೆಡ್ಯುಲ್ಗಳು ಆ ಚಿತ್ರದಲ್ಲಿ ನಟಿಸಲು ಆದ್ಯತೆ ನೀಡುತ್ತಿಲ್ಲ. ಈ ಕಾರಣದಿಂದ ಹನ್ಸಿಕ ಪಾತ್ರ ಈಗ ರಕುಲ್ ಪ್ರೀತ್ ಸಿಂಗ್ ಪಾಲಾಗಿದೆ.

ನಾವು ಹನ್ಸಿಕಾ ಮತ್ತು ಮಂಚು ಅವರ ಜೋಡಿಯನ್ನು ತೆರೆಯ ಮೇಲೆ ಅತ್ಯದ್ಭುತ ರೀತಿಯಲ್ಲಿ ತೋರಿಸುವ ಉದ್ದೇಶ ಹೊಂದಿದ್ದೆವು. ಆದರೆ ಆಕೆಗೆ ಸಮಯದ ಅಭಾವ ಇರುವುದರಿಂದ ನಮ್ಮ ಎಣಿಕೆಯಂತೆ ಸಾಧ್ಯವಾಗಲಿಲ್ಲ ಅಂತಾರೆ ನಿರ್ದೇಶಕ ನಾಗೆಶ್ವರ್ ರೆಡ್ಡಿ.

ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಬ್ಯುಸಿಯೆಷ್ಟ್ ನಟಿ ಹನ್ಸಿಕಾ. ಈಗ ಆಕೆ ಕೈಲಿ ಮನ್ ಕರಾತೆ, ಉಯಿರೆ ಉಯಿರೆ ಮತ್ತು ತೆಲುಗಿನ ಪವರ್ ಚಿತ್ರಗಳಿವೆ.

ರಕುಲ್ ಇತ್ತೀಚೆಗಷ್ಟೇ ತೆಲುಗು ಚಿತ್ರ ವೆಂಕಟಾದ್ರಿ ಎಕ್ಸ್ ಪ್ರೆಸ್ ನಲ್ಲಿ ನಟಿಸಿ ಗೆದ್ದಾಕೆ . ಅಲ್ಲದೆ ಆಕೆ ನಟಿಸಿರುವ ಹಿಂದಿ ಚಿತ್ರ ಯಾರಿಯಾನ್ ಸಹ ಬಾಕ್ಸಾಫೀಸಿನಲ್ಲಿ ಉತ್ತಮ ಗಳಿಕೆ ಕಂಡಿದೆ.

ವೆಬ್ದುನಿಯಾವನ್ನು ಓದಿ