ಸ್ಟಾರ್ ಸ್ಕ್ರೀನ್ ಅವಾರ್ಡ್ಸ್‌ನಲ್ಲಿ ಬಾಲಿವುಡ್ ಹಂಗಾಮ

ಮಂಗಳವಾರ, 6 ಡಿಸೆಂಬರ್ 2016 (11:25 IST)
ಮುಂಬೈನಲ್ಲಿ 23ನೇ ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಕಾರ್ಯಕ್ರಮ ಭಾನುವಾರ ಸಂಜೆ ಅದ್ದೂರಿಯಾಗಿ ನೆರವೇರಿತು. ಬಾಲಿವುಡ್ ತಾರೆಗಳ ನೃತ್ಯ ಈ ಪ್ರಶಸ್ತಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ದೀಪಿಕಾ ಪಡುಕೋಣೆ, ರೇಖಾ, ಸೋನಂ ಕಪೂರ್ ಜೊತೆಗೆ ಕೆಲವು ಸ್ಟಾರ್‌ಗಳು ಹಾಜರಾದರು. 
 
ಪಿಂಕ್ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅಮಿತಾಬ್ ಬಚ್ಚನ್ ಅತ್ಯುತ್ತಮ ನಟ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು. ಉಡ್ತಾ ಪಂಜಾಬ್ ಚಿತ್ರದಲ್ಲಿನ ಅಭಿನಯಕ್ಕಾಗಿ ಆಲಿಯಾ ಭಟ್‌ಗೆ ಶ್ರೇಷ್ಠ ನಟಿ ಪ್ರಶಸ್ತಿ ವರಿಸಿತು. ಆ ಕಾಲದ ಬೆಡಗಿ ರೇಖಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು.
 
ವೇದಿಕೆ ಮೇಲೆ ರೇಖಾ ಮಾಡಿದ ನೃತ್ಯ ವಿಶೇಷ ಆಕರ್ಷಣೆಯಾಗಿತ್ತು. ಪಿಂಕ್ ಚಿತ್ರಕ್ಕೆ ನಾಲ್ಕು ಪ್ರಶಸ್ತಿಗಳು ಸಿಕ್ಕಿವೆ. ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ನೀರಜಾ ಚಿತ್ರದ ರಾಮ್ ಮಧ್ವಾನಿ ಕೈವಶವಾಯಿತು. ಅತ್ಯುತ್ತಮ ಸ್ಕ್ರೀನ್ ಪ್ಲೇ ಸೈವಾನ್ ಕ್ವಾದ್ರಸ್‌ಗೆ ನೀಡಲಾಯಿತು. 
 
ಕಪೂರ್ ಅಂಡ್ ಸನ್ಸ್ ಚಿತ್ರದಲ್ಲಿ ಉತ್ತಮ ಪೋಷಕ ನಟ ರಿಷಿ ಕಪೂರ್ ಆಯ್ಕೆಯಾದರೆ, ನೀರಜಾ ಚಿತ್ರಕ್ಕೆ ಶಬಾನಾ ಅಜ್ಮಿ ಉತ್ತಮ ಪೋಷಕ ನಟಿಯಾಗಿ ಆಯ್ಕೆಯಾದರು. ಸಂಗೀತ ವಿಭಾಗದಲ್ಲಿ ಕರಣ್ ಜೋಹರ್ ನಿರ್ದೇಶನ ಮಾಡಿ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಬಿಡುಗಡೆಯಾದ ಯೇ ದಿಲ್ ಹೈ ಮುಷ್ಕಿಲ್ ಚಿತ್ರದ ಕೂಡ ಪ್ರಶಸ್ತಿಗೆ ಭಾಜನವಾಯಿತು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ