ಹೈದ್ರಾಬಾದ್:ಟಾಲಿವುಡ್ ಚಿತ್ರರಂಗದ ಹಲವರು ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿದ್ದು, ಇದರಿಂದ ಟಾಲಿವುಡ್ ಚಿತ್ರರಂಗದ ಹೆಸರು ಹಾಳಾಗುತ್ತಿದೆ ಎಂದು ಇತ್ತೀಚೆಗೆ ನಿರ್ಮಾಪಕ ಅಲ್ಲು ಅರವಿಂದ್ ಕಾವಳ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ತೆಲಂಗಾಣ ಅಬಕಾರಿ ಮತ್ತು ತರಬೇತಿ ಇಲಾಖೆ 15 ಟಾಲಿವುಡ್ ಸೆಲೆಬ್ರಿಟಿಗಳಿಗೆ ನೋಟಿಸ್ ಜಾರಿಮಾಡಿದೆ.
ಇನ್ನು ಈ ಮಾಫಿಯಾದಲ್ಲಿ ಕೇಳಿಬರುತ್ತಿರುವ ಹೆಸರುಗಳೆಂದರೆ ಸ್ಟಾರ್ ನಟ ರವಿತೇಜಾ, ಪುರಿ ಜಗನ್ನಾಥ್, ಸುಭ್ರರಾಜು, ಸಿಂಗರ್ ಗೀತಾ ಮಾಧುರಿಯ ಪತಿ ನಂದು, ತಾನಿಶ್, ನವದೀಪ್, ಚಾರ್ಮಿ, ಮುಮೈತಾ ಖಾನ್ ಮೊದಲಾದವರ ಹೆಸರು ಕೇಳಿಬರುತ್ತಿದ್ದು, ಇವರೆಲ್ಲಾ ಭಾಗಿಯಾಗಿದ್ದಾರೋ ಇಲ್ಲವೋ ಎಂಬುದು ತನಿಖೆಯಿಂದಷ್ಟೇ ಖಚಿತಪಡಬೇಕಿದೆ.