ಗಾರ್ಡನ್ ಸಿಟಿಯಲ್ಲಿ ಅದ್ದೂರಿಯಾಗಿ ಸಮಾಪ್ತಿಯಾದ ಫ್ಯಾಶನ್ ವೈಭವ ಕಾರ್ಯಕ್ರಮ

ಸೋಮವಾರ, 28 ಮೇ 2018 (18:40 IST)
ಭಾರತದ ಉದ್ಯಾನ ನಗರ ಎಂದೇ ಕರೆಯಲ್ಪಡುವ ಬೆಂಗಳೂರು ನಗರದಲ್ಲಿ ಬೆಂಗಳೂರು ಟೈಮ್ಸ್ ಫ್ಯಾಶನ್ ವೀಕ್ 2018 ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.

ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಫ್ಯಾಶನ್ ಅಭಿರುಚಿಯ ಯುವ ಸಮೂಹ ಹಾಗೂ ಹಲವು ಅತ್ಯುತ್ತಮ ಡಿಸೈನರ್ ಗಳ ಪ್ರತಿಭಾ ಪ್ರದರ್ಶನವನ್ನು ಅನಾವರಣ ಮಾಡಲಾಯಿತು.
ಬೆಂಗಳೂರಿನಲ್ಲಿ ನಡೆದ ಈ ಫ್ಯಾಶನ್ ಹಬ್ಬದಲ್ಲಿ ಫ್ಯಾಶನ್ ಲೋಕದ ದಿಗ್ಗಜರೆಲ್ಲಾ ಒಟ್ಟು ಸೇರಿದ್ದರು. ಹಲವು ಖ್ಯಾತನಾಮರು ಸೇರಿದಂತೆ ಫ್ಯಾಶನ್ ಲೋಕದಲ್ಲಿ ಮಿಂಚಲು ತಯಾರಾದ ಯುವ ಸಮೂಹವೇ ನೆರೆದಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಿನಾ ಧಾಕಾ, ತಮ್ಮ ಅತ್ಯುತ್ತಮವಾದ ಡಿಸೈನ್ ಅನ್ನು ವಾಸ್ತವತೆ ಮತ್ತು ಶಾಂತಿಯ ನೆಲೆಗಟ್ಟಿನಲ್ಲಿ ಪ್ರಸ್ತುತಪಡಿಸಿದರು. ಮಾತ್ರವಲ್ಲದೇ ಮಹಿಳಾ ಸಬಲೀಕರಣದ ಕುರಿತಾದಂತೆ ಉತ್ತಮ ಮತ್ತು ಸಮಗ್ರ ವಿವರಣೆಯನ್ನು ನೀಡಿದರು. ಬಳಿಕ ಆಗಮಿಸಿದ ನಟಿ ರೂಹಿ ಸಿಂಗ್ ರ್ಯಾಂಪ್ ತುಂಬಾ ಆವರಿಸಿಕೊಂಡು ಪ್ರೇಕ್ಷಕರ ಮನಗೆದ್ದರು.

ಬಳಿಕ ಖ್ಯಾತ ಡಿಸೈನರ್ ಪ್ರಿಯಾ ಕಟಾರಿಯಾ ರ್ಯಾಂಪ್ ನಲ್ಲಿ ತಮ್ಮ ವಿಭಿನ್ನ ಮತ್ತು ವೈವಿಧ್ಯಮಯವಾದ ರೆಸಾರ್ಟ್ ವೇರ್ ಉಡುಗೆಗಳೊಂದಿಗೆ ಕಿಚ್ಚು ಹಚ್ಚಿದರು. ಸ್ಯಾಂಟೋರಿನಿ ಇನ್ ಸ್ಪೈರ್ಡ್ ಸಂಗ್ರಹಗಳೊಂದಿಗೆ ನಟಿ ಹಾಗೂ 2009ರ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿದ್ದ ಪೂಜಾ ಚೋಪ್ರಾ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದರು.
ಅಪಾರೆಲ್ ಟ್ರೈನಿಂಗ್ ಹಾಗೂ ಡಿಸೈನ್ ಸೆಂಟರ್ ನ ವಿದ್ಯಾರ್ಥಿಗಳು ತಮ್ಮ 'ಕಾನ್ವೆರ್ಜ್' ಎಂಬ ಸಂಗ್ರಹವನ್ನು ಪ್ರಸ್ತುತಪಡಿಸಿದರು. ಈ ಮೂಲಕ ಭಾರತೀಯ ಸಂಪ್ರದಾಯ ಹಾಗೂ ವೈವಿಧ್ಯತೆಯನ್ನು ಉಡುಗೆಯ ಮೂಲಕ ತೋರ್ಪಡಿಸಲಾಯಿತು.

ರಾಜಸ್ತಾನದ ಖ್ಯಾತ ಕಲಾ ವಿಧಾನವಾದ ವರ್ಲಿ ಕಲಾತ್ಮಕತೆ ಹಾಗೂ ಚಾರ್ಮಿನಾರ್ ನ ಪರಂಪರೆಯನ್ನು ಬಿಂಬಿಸುವ ವಸ್ತ್ರ ವೈವಿಧ್ಯತೆಯು ಪ್ರೇಕ್ಷಕರನ್ನು ನಿಜಕ್ಕೂ ಭಾರತದಾದ್ಯಂತ ಕರೆದೊಯ್ದಿತ್ತು. ವೈವಿಧ್ಯಮಯ ಮದುವೆ ಟ್ರೌಸರ್ ಗಳ ವಿನ್ಯಾಸದಲ್ಲಿ ಪ್ರಸಿದ್ಧಿ ಪಡೆದಿರುವ ಡಿಸೈನರ್ ಮೆರಾಜ್, ತಮ್ಮ ಬೇಸಿಗೆ ಮತ್ತು ಸ್ಪ್ರಿಂಗ್ ಕಾಲದ 'ರಿಝಾ' ಸಿಲ್ಕ್ ಹಾಗೂ ಝರ್ದೊಸಿ ಕಲೆಕ್ಷನ್ ಗಳನ್ನ ಪ್ರಸ್ತುತಪಡಿಸಿದರು.
ಶೀಘ್ರದಲ್ಲೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಗೈಯಲಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಶ್ರೀಶಾಂತ್ ಕೂಡಾ ರ್ಯಾಂಪ್ ನಲ್ಲಿ ಹೆಜ್ಜೆ ಹಾಕಿದರು. ಡಿಸೈನರ್ ರಮೇಶ್ ದೆಂಬ್ಲಾ ರ ನೂತನ ಸಂಗ್ರಹವಾದ ದಿ ಮೂಡಿ ಬ್ಲೂಸ್, ಏಸ್ ಡಿಸೈನರ್ ಹಾಗೂ ಕಾಮನಬಿಲ್ಲು ಬಣ್ಣದ ಭಾರತೀಯ ಮತ್ತು ಪಾಶ್ಚಿಮಾತ್ಯ ಶೈಲಿಯ ವಸ್ತ್ರಗಳು ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ತಾರೆಯರಾದ ಜಯರಾಮ್ ಕಾರ್ತಿಕ್ ಹಾಗೂ ಶುಭ್ರಾ ಅಯ್ಯಪ್ಪ ಕೂಡಾ ಭಾಗವಹಿಸಿದ್ದರು.
ಬೆಂಗಳೂರು ಟೈಮ್ಸ್ ಫ್ಯಾಶನ್ ವೀಕ್-2018 ಕಾರ್ಯಕ್ರಮದ ಕೊನೆಯ ದಿನದಂದು ಅರ್ಚನಾ ಕೊಚ್ಚಾರ್ ಪ್ರಸ್ತುತಪಡಿಸಿದ ಸಮ್ಮರ್ ಬ್ರೈಡ್ಸ್ ಕೊನೆಯ ದಿನಕ್ಕೊಂದು ಮೆರುಗು ನೀಡಿತು. ಖ್ಯಾತ ಬಾಲಿವುಡ್ ನಟಿ ಕೃತಿ ಖರಬಂಧ ರ್ಯಾಂಪ್ ನಲ್ಲಿ ಹೆಜ್ಜೆ ಹಾಕಿ ಕಾರ್ಯಕ್ರಮದ ಸೊಬಗು ಹೆಚ್ಚಿಸಿದರು. ವೈಭವದ ಭಾರತೀಯ ಮದುವೆ ಕಾರ್ಯಕ್ರಮಗಳಿಂದ ಪ್ರೇರಣೆಗೊಂಡಂತೆ ಕೊಚ್ಚಾರ್ ಪ್ರಸ್ತುತಪಡಿಸಿದ ಹಲವು ವೈವಿಧ್ಯಮಯ ಬಣ್ಣಗಳ ಉಡುಗೆಗಳು ಎಲ್ಲರ ಗಮನ ಸೆಳೆದವು.
ಒಂದು ಉತ್ತಮ ಮತ್ತು ಪ್ರಬಲ ಸಂದೇಶದೊಂದಿಗೆ ಆರಂಭವಾಗಿದ್ದ ಕಾರ್ಯಕ್ರಮವು ಮೈನವಿರೇಳಿಸುವ ಪ್ರದರ್ಶನದೊಂದಿಗೆ ಮುಕ್ತಾಯ ಕಂಡಿತು. ಕೃತಿ ಕರಬಂಧ, ಶ್ರೀಶಾಂತ್, ಜಯರಾಮ್ ಕಾರ್ತಿಕ್, ರೂಹಿ ಸಿಂಗ್ ಸೇರಿದಂತೆ ಬೆಂಗಳೂರು ಟೈಮ್ಸ್ ಫ್ಯಾಶನ್ ವೀಕ್ ರ್ಯಾಂಪ್ ಶೋಗೆ ತಾರಾ ತಂಡ. ಕಿಚ್ಚುಹಚ್ಚಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ