ಶ್ರೀಶಾಂತ್ ವಿದೇಶದ ಪರವೂ ಆಡುವಂತಿಲ್ಲ: ಬಿಸಿಸಿಐ

ಶನಿವಾರ, 21 ಅಕ್ಟೋಬರ್ 2017 (10:28 IST)
ಮುಂಬೈ: ಭಾರತ ಕ್ರಿಕೆಟ್ ತಂಡದ ಪರ ಆಡಲು ಅವಕಾಶ ಕೊಡದಿದ್ದರೆ ವಿದೇಶಿ ತಂಡದ ಪರವಾದರೂ ಆಡುತ್ತೇನೆ. ಕ್ರಿಕೆಟ್ ಗಾಗಿ ದೇಶ ಬಿಡುತ್ತೇನೆ ಎಂದಿದ್ದ ವೇಗಿ ಶ್ರೀಶಾಂತ್ ಕನಸಿಗೆ ಬಿಸಿಸಿಐ ತಣ್ಣೀರೆರಚಿದೆ.

 
ದೇಶದ ಪರ ಆಡುವುದು ನನ್ನ ಬಯಕೆ. ಆದರೆ ಬಿಸಿಸಿಐ ನನ್ನ ಮೇಲಿನ ನಿಷೇಧ ತೆರವುಗೊಳಿಸುತ್ತಿಲ್ಲ. ಹೀಗೇ ಆದರೆ ವಿದೇಶೀ ತಂಡದ ಪರವಾದರೂ ಆಡುತ್ತೇನೆ ಎಂದು ಮ್ಯಾಚ್ ಫಿಕ್ಸಿಂಗ್ ಕಳಂಕಕ್ಕೆ ತುತ್ತಾಗಿದ್ದ ಶ್ರೀಶಾಂತ್ ಹೇಳಿದ್ದರು.

ಅವರ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಿಸಿಸಿಐ, ವಿದೇಶೀ ತಂಡದ ಪರವೂ ಶ್ರೀಶಾಂತ್ ಆಡುವಂತಿಲ್ಲ ಎಂದಿದೆ. ಐಸಿಸಿ ನಿಮಯದ ಪ್ರಕಾರ, ಯಾವುದೇ ಆಟಗಾರನೂ ತನ್ನ ಮಾತೃ ಸಂಸ್ಥೆಯಿಂದ ನಿಷೇಧಕ್ಕೊಳಗಾದರೆ ವಿದೇಶೀ ತಂಡದ ಪರವೂ ಆಡುವಂತಿಲ್ಲ.  ಇದು ಶ್ರೀಶಾಂತ್ ಗೂ ಅನ್ವಯವಾಗುತ್ತದೆ ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿದೆ. ಇದರೊಂದಿಗೆ ವಿದೇಶೀ ತಂಡದ ಪರ ಆಡುವ ಶ್ರೀಶಾಂತ್ ಕನಸೂ ಭಗ್ನವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ