ಹೆಣ್ಣು ಮಗುವಿಗೆ ಅಪ್ಪನಾದ ನಟ ಶಾಹಿದ್ ಕಪೂರ್

ಶನಿವಾರ, 27 ಆಗಸ್ಟ್ 2016 (12:02 IST)
ಬಾಲಿವುಡ್ ನಟ ಶಾಹಿದ್ ಕಪೂರ್ ಪತ್ನಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಮೊನ್ನೆ ಮುಂಬೈನ ಆಸ್ಪತ್ರೆಗೆ ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ರಾತ್ರಿ ಅವರು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ, ಶಾಹಿದ್ ಕಪೂರ್ ಕುಟುಂಬದಲ್ಲಿ ಮೊದಲ ಮಗುವಿನ ಆಗಮನಮಾಗಿದೆ.  

ಶಾಹಿದ್ ಕಪೂರ್ ಪೋಷಕರಾದ ಪಂಕಜ್ ರಜಪೂತ್ ಹಾಗೂ ಸುಪ್ರಿಯಾ ರಜಪೂತ್ ನಿವಾಸಕ್ಕೆ ಬಂದು ಮೀರಾ ಜತೆಯಿಲ್ಲೇ ಇದ್ದಾರೆ.  ಶಾಹಿದ್ ಕಪೂರ್ ಪೋಷಕರು ಹಾಗೂ ಮೀರಾ ರಜಪೂತ್ ಪೋಷಕರು ಆಸ್ಪತ್ರೆಗೆ ತೆರಳಿ ಮೀರಾರನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ.
 
ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಹಲವು ದಿನಗಳಿಂದ ಕೇರ್ ತೆಗೆದುಕೊಳ್ಳುತ್ತಿದ್ದರು, ನಟ ಶಾಹಿದ್ ಕಪೂರ್ ಅಪ್ಪನಾಗುತ್ತಿರುವುದ ಬಗ್ಗೆ ಎಲ್ಲಾ ಕಡೆ ಸುದ್ದಿಯಾಗಿತ್ತು. ಸೆಪ್ಟೆಂಬರ್ ವೇಳೆಗೆ ಮೀರಾ ಮೊದಲ ಮಗುವಿಗೆ ಜನ್ಮ ನೀಡುತ್ತಾರೆ ಎನ್ನಲಾಗ್ತಿತ್ತು. ಆದ್ರೆ ಅದಕ್ಕೂ ಮುನ್ನವೇ ಮೀರಾ ಮಗುವಿಗೆ ಜನ್ಮ ನೀಡಿದ್ದಾರೆ. 
 
ಬಹುದಿನದ ಫ್ರೆಂಡ್‌ಶಿಪ್ ಬಳಿಕ 2015ರಲ್ಲಿ ಜುಲೈರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಈ ಎರಡು ಜೋಡಿಗಳು, ಬಾಲಿವುಡ್‌ನ ಕ್ಯೂಟ್ ಕಪಲ್‌ಗಳಲ್ಲಿ ಒಬ್ಬರು, ಈ ಹಿಂದೆ ಅವರಿಬ್ಬರು ಒಬ್ಬರನೊಬ್ಬರು ಜೋತೆ ಜೋತೆಯಾಗಿಯೇ ಸುತ್ತಾಡಿದರು.
 
ಇನ್ನೂ ಮೊನ್ನೆ ತಾನೇ ಮೀರಾ ರಜಪೂತ್ ಹಾಗೂ ಶಾಹೀದ್ ವೆಕೆಷನ್ ಟ್ರಿಪ್ ಮುಗಿಸಿಕೊಂಡು ಬಂದಿದ್ದರು.ಸದ್ಯ ಮೀರಾ ರಜಪೂತ್ ಅಮ್ಮ ಆಗುತ್ತಿದ್ದಾಳೆ. ರಜಪೂತ್ ಕುಟುಂಬಕ್ಕೆ ನೂತನ ಸದಸ್ಯನ ಆಗಮನದಿಂದ ಶಾಹಿದ್ ಕಪೂರ್ ಫ್ಯಾಮಿಲಿ ಖುಷಿಯಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ