ಮುಂಬೈ: ಮಾರಕ ಎಚ್1ಎನ್1 ರೋಗ ಬಾಲಿವುಡ್ ಮಂದಿಯನ್ನೂ ಬಿಟ್ಟಿಲ್ಲ ನೋಡಿ. ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ಪತ್ನಿ ಕಿರಣ್ ರಾವ್ ಗೆ ಎಚ್1ಎನ್1 ಸೋಂಕು ತಗಲಿದೆ.
ಇವರಿಬ್ಬರಿಗೂ ಎಚ್1ಎನ್1 ಜ್ವರದಿಂದ ಬಳಲುತ್ತಿದ್ದು, ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಮೊದಲು ಅಮೀರ್ ಖಾನ್ ಗೆ ಜ್ವರ ಬಂದಿತ್ತು. ನಂತರ ಪತ್ನಿ ಕಿರಣ್ ರಾವ್ ಗೆ ಜ್ವರ ಹರಡಿದೆ. ರಕ್ತ ಪರೀಕ್ಷೆಯ ನಂತರ ಮಾರಕ ಸೋಂಕು ಪತ್ತೆಯಾಗಿದೆ.
ಇದೀಗ ಇಬ್ಬರೂ ವೈದ್ಯರ ತೀವ್ರ ನಿಗಾದಲ್ಲಿದ್ದು, ಒಂದು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ.