ಮಗಳಿಗಾಗಿ ಅಪ್ಪಂದಿರು ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದ ಅಭಿಷೇಕ್ ಬಚ್ಚನ್!
ಅದಕ್ಕಾಗಿ ಅವರು ಮಗಳಿಗೆ ಕಿವಿ ಚುಚ್ಚುವ ಮೊದಲು ತಾವು ಮೊದಲು ಚುಚ್ಚಿಸಿಕೊಂಡರಂತೆ. ಆ ಮೂಲಕ ಅದೆಷ್ಟು ನೋವು ಕೊಡುತ್ತದೆ ಎಂದು ಮೊದಲು ತಾನು ಅನುಭವಿಸುತ್ತೇನೆ ಎಂಬುದು ಅಪ್ಪನ ಆಶಯ. ಆ ಬಳಿಕವಷ್ಟೇ ಮಗಳಿಗೆ ಕಿವಿ ಚುಚ್ಚಲು ಬಿಟ್ಟರಂತೆ. ಇದನ್ನು ಸ್ವತಃ ಅಭಿಷೇಕ್ ತಮ್ಮ ತಂದೆ ಅಮಿತಾಭ್ ಬಚ್ಚನ್ ನಿರೂಪಣೆ ಮಾಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಶೂಟಿಂಗ್ ಸಂದರ್ಭದಲ್ಲಿ ಹೇಳಿಕೊಂಡಿದ್ದಾರಂತೆ. ಈ ಎಪಿಸೋಡ್ ಇನ್ನಷ್ಟೇ ಪ್ರಸಾರವಾಗಬೇಕಿದೆ.