ನಟ ದರ್ಶನ್‌ಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡದೆ ಹಿಂಸೆ: ಆದೇಶ ಕಾಯ್ದಿರಿಸಿದ ನ್ಯಾಯಾಲಯ

Sampriya

ಬುಧವಾರ, 17 ಸೆಪ್ಟಂಬರ್ 2025 (19:33 IST)
ಬೆಂಗಳೂರು: ನ್ಯಾಯಾಲದ ಆದೇಶದ ಬಳಿಕವೂ ನಟ ದರ್ಶನ್‌ ಅವರಿಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯವನ್ನು ಅಧಿಕಾರಿಗಳು ನೀಡಿಲ್ಲ ಎಂದು ದರ್ಶನ್‌ ಪರ ಸಲ್ಲಿಸಿದ ಅರ್ಜಿಯ ಆದೇಶವನ್ನು ಕೋರ್ಟ್‌ ಕಾಯ್ದಿರಿಸಿದೆ. 

57ನೇ ಸಿಸಿಹೆಚ್ ಕೋರ್ಟ್ ಆದೇಶದ ಬಳಿಕವೂ ದರ್ಶನ್‌ಗೆ ಹಾಸಿಗೆ, ದಿಂಬು ನೀಡಿಲ್ಲ ಎಂದು ಆರೋಪಿ ಪರ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು. ಆರೋಪಿ ದರ್ಶನ್ ಪರ ವಕೀಲರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದರು.

ಕೋರ್ಟ್‌ನಲ್ಲಿ ಇಂದು ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ದರ್ಶನ್‌ಗೆ ನೀಡಿರುವ ಸೌಲಭ್ಯಗಳ ಕುರಿತ ವರದಿಯನ್ನು ಸರ್ಕಾರದ ಪರ ವಕೀಲ ಸಚಿನ್ ಸಲ್ಲಿಕೆ ಮಾಡಿದರು. ಈ ವೇಳೆ ದರ್ಶನ್ ಪರ ವಕೀಲ ಸುನೀಲ್ ವಾದ ಆರಂಭಿಸಿ, ಕೋರ್ಟ್ ಆದೇಶ ಮಾಡಿದರೂ ಕೂಡ ಲಘುವಾಗಿ ಪರಿಗಣಿಸಿದೆ. 

ದರ್ಶನ್‌ ಅವರಿಗೆ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ಕ್ವಾರಂಟೈನ್ ಸೆಲ್ ಅಲ್ಲಿ ಒಂದು ತಿಂಗಳಿಂದ ಇರಿಸಿದ್ದಾರೆ. ಪಾಕಿಸ್ತಾನದ ಆರೋಪಿಗಳಿಗೂ ಕೇರಂ ಗೇಮ್ ಆಡೋಕೆ ಬಿಟ್ಟಿದ್ದಾರೆ. ನಮ್ಮ ಆರೋಪಿಗೆ ಅದನ್ನ ಕೊಡದೆ ಹಿಂಸೆ ನೀಡುತ್ತಿದ್ದಾರೆ ಎಂದು ವಾದ ಮಂಡಿಸಿದರು.

ಸಚಿನ್ ಪ್ರತಿವಾದ ಮಾಡಿ, ಜೈಲ್ ಮ್ಯಾನುಯಲ್ ಹೊರತುಪಡಿಸಿ ಹೆಚ್ಚಿನ ಸೌಲಭ್ಯ ಕೊಟ್ಟಿಲ್ಲ. ಕಂಬಳಿ, ಬ್ಲಾಂಕೇಟ್, ಲೋಟ, ತಟ್ಟೆ ನೀಡಲಾಗಿದೆ. ಬೆಳಗ್ಗೆ ಹಾಗೂ ಸಂಜೆ ವಾಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಮ್ಯಾನ್ಯುಯಲ್ ಪ್ರಕಾರವೇ ಎಲ್ಲವನ್ನೂ ನೀಡಲಾಗ್ತಿದೆ ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಸೆ.19ಕ್ಕೆ ಆದೇಶವನ್ನು ಕಾಯ್ದಿರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ