ಮುಂಬೈ: ಅನಂತ್ ಅಂಬಾನಿ ಮದುವೆಯಲ್ಲಿ ಪತ್ನಿ, ಮಗಳನ್ನು ಬಿಟ್ಟು ತಂದೆ-ತಾಯಿ, ಪೋಷಕರೊಂದಿಗೆ ಫೋಟೋಗೆ ಪೋಸ್ ಕೊಟ್ಟ ಅಭಿಷೇಕ್ ಬಚ್ಚನ್ ಗೆ ನೆಟ್ಟಿಗರು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಅನಂತ್ ಅಂಬಾನಿ ಮದುವೆಯಲ್ಲಿ ಬಚ್ಚನ್ ಪರಿವಾರದ ಎಲ್ಲರೂ ಬಂದಿದ್ದರು. ಆದರೆ ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಮಗಳು, ಅಳಿಯನ ಜೊತೆಗೆ ಅಭಿಷೇಕ್ ಬಚ್ಚನ್ ಫೋಟೋಗೆ ಪೋಸ್ ನೀಡಿದ್ದರು. ಅವರ ಜೊತೆಗೇ ಅಭಿಷೇಕ್ ಇದ್ದರು. ಇವರ ಬಳಿಕ ಐಶ್ವರ್ಯಾ ಮತ್ತು ಮಗಳು ಆರಾಧ್ಯ ಪ್ರತ್ಯೇಕವಾಗಿ ಬಂದು ಫೋಟೋಗೆ ಪೋಸ್ ನೀಡಿದ್ದರು.
ಪತ್ನಿ ಐಶ್ವರ್ಯಾ ಮತ್ತು ಮಗಳು ಆರಾಧ್ಯಳನ್ನು ಬಿಟ್ಟು ನಿಮ್ಮ ತಂದೆ-ತಾಯಿ ಜೊತೆಗೇ ಅಂಟಿಕೊಂಡಿದ್ದೀರಲ್ಲಾ? ಪತ್ನಿ, ಮಗಳನ್ನು ಏಕಾಂಗಿಯ ಬಿಟ್ಟ ನೀವೆಂಥಾ ಗಂಡ ಎಂದು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೆ ಕೆಲವರು ನಿಮಗೆ ಸೊಸೆ ಇಷ್ಟವಿಲ್ಲವೆಂದ ಮೇಲೆ ಮಗನಿಗೆ ಯಾಕೆ ಮದುವೆ ಮಾಡಿಸಿದಿರಿ. ಆಕೆಗೆ ಆಕೆಯದ್ದೇ ಕೆರಿಯರ್ ಇತ್ತು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.