ರಿಷಬ್ ಶೆಟ್ಟಿ ಹೈದರಾಬಾದ್ ನಲ್ಲಿ ಕನ್ನಡ ಮಾತನಾಡಿದ್ದು ಇದೇ ಕಾರಣಕ್ಕೆ

Krishnaveni K

ಶುಕ್ರವಾರ, 10 ಅಕ್ಟೋಬರ್ 2025 (11:11 IST)
ಬೆಂಗಳೂರು: ಇತ್ತೀಚೆಗೆ ಕಾಂತಾರ ಚಾಪ್ಟರ್ 1 ಸಿನಿಮಾದ ಪ್ರಮೋಷನ್ ವೇಳೆ ಹೈದರಾಬಾದ್ ನಲ್ಲಿ ರಿಷಬ್ ಶೆಟ್ಟಿ ಕನ್ನಡದಲ್ಲಿಯೇ ಮಾತನಾಡಿದ್ದು ತೆಲುಗಿನವರ ಕಣ್ಣು ಕೆಂಪಗಾಗಿಸಿತ್ತು. ಅಂದು ಅವರು ಕನ್ನಡದಲ್ಲೇ ಮಾತನಾಡಿದ್ದು ಯಾಕೆ ಎಂದು ಬಹಿರಂಗಪಡಿಸಿದ್ದಾರೆ.

ರಿಷಬ್ ಶೆಟ್ಟಿ ಹೈದರಾಬಾದ್ ನ ಪ್ರಿ ರಿಲೀಸ್ ಈವೆಂಟ್ ನಲ್ಲಿ ಸಂಪೂರ್ಣವಾಗಿ ಕನ್ನಡದಲ್ಲೇ ಮಾತನಾಡಿದ್ದರು. ಆ ವೇದಿಕೆಯಲ್ಲಿ ಜ್ಯೂ ಎನ್ ಟಿಆರ್ ಕೂಡಾ ಇದ್ದರು. ಆದರೆ ರಿಷಬ್ ಹೈದರಾಬಾದ್ ಗೆ ಬಂದು ತೆಲುಗಿನಲ್ಲಿ ಮಾತನಾಡಿಲ್ಲ ಎಂದು ಅಲ್ಲಿನವರು ದೊಡ್ಡ ವಿವಾದವನ್ನೇ ಮಾಡಿದ್ದರು.

ಇದೇ ಕಾರಣಕ್ಕೆ ಕಾಂತಾರ ಚಾಪ್ಟರ್ 1 ಸಿನಿಮಾ ಬಹಿಷ್ಕರಿಸಿ ಎಂದು ಕೆಲವರು ಕರೆ ಕೊಟ್ಟಿದ್ದರು. ಇದು ಚಿತ್ರತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಇದರ ಬಗ್ಗೆ ಇದೀಗ ರಿಷಬ್ ಸಂದರ್ಶನವೊಂದರಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

‘ನನಗೆ ಅಂದು ಕೆಲವು ಭಾವನಾತ್ಮಕ ವಿಚಾರಗಳನ್ನು ಹೇಳಬೇಕಿತ್ತು. ಅವತ್ತು ಅಲ್ಲಿ ಜ್ಯೂ ಎನ್ ಟಿಆರ್ ಕೂಡಾ ಇದ್ದರು. ಹೀಗಾಗಿ ಕನ್ನಡದಲ್ಲೇ ಮಾತನಾಡಿದ್ದೆ. ನನಗೆ ತೆಲುಗು ಮತ್ತು ಹಿಂದಿ ಭಾಷೆ ಸರಿಯಾಗಿ ಬರಲ್ಲ. ಎರಡೂ ಅಷ್ಟಕ್ಕಷ್ಟೇ. ಇಂಗ್ಲಿಷ್ ನಲ್ಲೂ ಅಷ್ಟು ಹಿಡಿತವಿಲ್ಲ. ಹೀಗಾಗಿ ನನ್ನ ಮಾತೃಭಾಷೆಯನ್ನೇ ಬಳಸಿದೆ. ನಾನು ಯೋಚಿಸುವುದು ಕನ್ನಡದಲ್ಲಿ ಹೀಗಾಗಿ ಕನ್ನಡದಲ್ಲೇ ಮಾತನಾಡಿದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ