20 ವರ್ಷಗಳ ವೈವಾಹಿಕ ಜೀವನಕ್ಕೆ ಎಳ್ಳುನೀರು ಬಿಡಲು ಹೊರಟ ನಟ ಅರ್ಜುನ್ ರಾಂಪಾಲ್ ಹಾಗೂ ಮೆಹರ್ ಜೆಸ್ಸಿಯಾ
ಮಂಗಳವಾರ, 29 ಮೇ 2018 (07:41 IST)
ಮುಂಬೈ : ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಮತ್ತು ಮಾಡೆಲ್ , ನಿರ್ಮಾಪಕಿ ಮೆಹರ್ ಜೆಸ್ಸಿಯಾ ಅವರು ತಮ್ಮ 20 ವರ್ಷಗಳ ವೈವಾಹಿಕ ಜೀವನಕ್ಕೆ ಇದೀಗ ವಿದಾಯ ಹೇಳಲು ಹೊರಟ್ಟಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
1998 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಅರ್ಜುನ್ ಮತ್ತು ಮೆಹರ್ ಅವರಿಗೆ, ಮಾಹಿಕಾ (16) ಮತ್ತು ಮೈರಾ (13) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ಇದೀಗ ಇವರು ಬೇರೆಯಾಗಲು ಸಿರ್ಧರಿಸಿದ್ದು ಅವರ ಅಭಿಮಾನಿಗಳಿಗೆ ಆಘಾತವನ್ನು ಉಂಟುಮಾಡಿದೆ.
‘ಪ್ರೀತಿ ಮತ್ತು ಸುಂದರ ನೆನಪುಗಳನ್ನು ತುಂಬಿದ 20 ವರ್ಷಗಳ ದೀರ್ಘ ಪ್ರಯಾಣದ ನಂತರ, ನಾವು ಹಂಚಿಕೊಳ್ಳಲು ಬಯಸುತ್ತೇವೆ, ಎಲ್ಲಾ ಪ್ರಯಾಣಗಳು ಕೂಡ ವಿಭಿನ್ನ ಮಾರ್ಗಗಳನ್ನು ಹೊಂದಿವೆ. ನಾವು ಇನ್ನು ಮುಂದೆ ನಮ್ಮದೇ ಆದ ದಾರಿಯಲ್ಲಿ ಸಾಗಲು ಇದು ಸರಿಯಾದ ಸಮಯವೆಂದು ಭಾವಿಸುತ್ತೇವೆ. ನಾವು ಒಂದು ಕುಟುಂಬ, ನಮ್ಮ ಪ್ರೀತಿಯು ಶಾಶ್ವತ. ಮತ್ತು ನಾವು ಯಾವಾಗಲೂ ನಮ್ಮ ಮಕ್ಕಳಿಗಾಗಿ ಮಾಹಿಕಾ ಮತ್ತು ಮೈರಾಗೆ ಪರಸ್ಪರ ಇರುತ್ತೇವೆ. ಆದ್ದರಿಂದ, ಈ ಸಮಯದಲ್ಲಿ ನಾವು ನಮ್ಮ ಗೌಪ್ಯತೆಯನ್ನು ಪ್ರಶಂಸಿಸುತ್ತೇವೆ. ನಮ್ಮ ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಸಂಬಂಧಗಳು ಕೊನೆಗೊಳ್ಳಬಹುದು, ಆದರೆ ಜೀವನವನ್ನು ಪ್ರೀತಿ ಹಾಗೆಯೇ ಇರುತ್ತದೆ. ಇದಕ್ಕಿಂತ ಹೆಚ್ಚು ನಾವು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಸ್ವತಃ ಇವರಿಬ್ಬರು ಬಾಂಬೆ ಟೈಮ್ಸ್ ನಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ